ದೊಡ್ಡಬಳ್ಳಾಪುರ : ತಾಲೂಕಿನ ಮಜರಾಹೊಸಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ಎಚ್.ಎ ಆನಂದ್ ಕುಮಾರ್ ಅವಿರೋಧ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿಲಕ್ಷ್ಮೀನಾರಾಯಣಮೂರ್ತಿ ಮುಂದುವರೆದಿದ್ದಾರೆ.
ಮಜರಾಹೊಸಹಳ್ಳಿ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮೀಸಲಾತಿ ಅಡಿ ಜಿಲ್ಲಾಧಿಕಾರಿಗಳ ಸೂಚನೆಯಂತೆ ಚುನಾವಣೆಯನ್ನು ನಿಗದಿಯಂತೆ ಶುಕ್ರವಾರ ಮಾಡಲಾಯಿತು.ಅಧ್ಯಕ್ಷ ಸ್ಥಾನಕ್ಕೆಏಕೈಕ ನಾಮಪತ್ರ ಸಲ್ಲಿಸಿದ ಕಾರಣ ಚುನಾಣಾಧಿಕಾರಿ ದ್ರಾಕ್ಷಾಯಿಣಿ ನಿಯಮಾನುಸಾರ ಅಧ್ಯಕ್ಷರಾಗಿ ಎಚ್.ಎ ಆನಂದ್ ಕುಮಾರ್ ಅವರನ್ನು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.
ಒಟ್ಟು 18 ಸದಸ್ಯ ಬಲದ ಮಜರಾಹೊಸಹಳ್ಳಿ ಗ್ರಾಮ ಪಂಚಾಯತಿಯಲ್ಲಿ 12 ಸದಸ್ಯರು ಕಾಂಗ್ರೆಸ್ ಬೆಂಬಲಿತ ಹಾಗೂ ತಲಾ ಮೂವರು ಜೆಡಿಎಸ್ ಮತ್ತು ಬಿಜೆಪಿ ಬೆಂಬಲಿತರಾಗಿ ಆಯ್ಕೆಯಾಗಿದ್ದಾರೆ. ಮಜರಾಹೊಸಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ದೊಡ್ಡ ತುಮಕೂರು ಹಾಗೂ ಚಿಕ್ಕತುಮಕೂರು ಕೆರೆಗಳಿಗೆ ವಿಷಕಾರಿ ತ್ಯಾಜ್ಯ ನೀರು ಹರಿಯುತ್ತಿರುವುದರಿಂದ ಕೆರೆಯ ನೀರು ಸಂಪೂರ್ಣ ಮಲಿನಗೊಂಡಿದೆ. ಈಗಾಗಲೇ ರೈತರು, ಗ್ರಾಮಸ್ಥರು ಪಕ್ಷಾತೀತವಾಗಿ ಹೋರಾಟವನ್ನು ನಡೆಸುತ್ತಿದ್ದಾರೆ. ನಾನು ಕೂಡ ಪಂಚಾಯತಿ ಅಧ್ಯಕ್ಷನಾಗಿ ತ್ಯಾಜ್ಯ ನೀರು ತಡೆಗೆ ಹೋರಾಟ ಮಾಡುತ್ತೇನೆ. ಕೆರೆ ಉಳಿಸುವ ಕೆಲಸ ಮಾಡುತ್ತೇನೆ ಎಂದು ಎಚ್.ಎ ಆನಂದ್ ಕುಮಾರ್ ಭರವಸೆ ನೀಡಿದರು.
Kshetra Samachara
02/09/2022 05:31 pm