ಬೆಂಗಳೂರು: ತೆಲಂಗಾಣದ ಕೊತಗುಡೆಮ್ ಜಿಲ್ಲೆಯಲ್ಲಿ ಪರಿಹಾರ ಕಾರ್ಯಾಚರಣೆಗಾಗಿ ನಿಯೋಜಿಸಲಾದ IAF ನ ಚೇತಕ್ ಹೆಲಿಕಾಪ್ಟರ್ ಜಿಲ್ಲೆಯ ಚೆರ್ಲಾ ಮತ್ತು ದುಮ್ಮುಗುಡೆಮ್ ಗ್ರಾಮಗಳಿಗೆ ಪರಿಹಾರ ಕಾರ್ಯಾಚರಣೆಯನ್ನು ಮುಂದುವರೆಸಿದೆ.
ಚೇರ್ಲಾ ಗ್ರಾಮದಲ್ಲಿ ಒಟ್ಟು 470 ಕೆಜಿ ದಿನನಿತ್ಯ ಬಳಸುವ ವಸ್ತಗಳನ್ನ ಒತ್ತೋಯ್ಯಲಾಗಿದೆ. ಮತ್ತು ದುಮ್ಮುಗುಡೆಂ ಗ್ರಾಮದಲ್ಲಿ 670 ಕೆಜಿ ಪರಿಹಾರ ಸಾಮಗ್ರಿಗಳನ್ನು ಇಳಿಸಲಾಗಿದೆ.
ಹೆಲಿಕಾಪ್ಟರ್ ನಲ್ಲಿ ಜಿಲ್ಲೆಯ ಹೆಚ್ಚು ಹಾನಿಗೊಳಗಾದ ಪ್ರದೇಶಗಳಿಗೆ ಅಗತ್ಯವಿರುವ 1930 ಕೆಜಿಯಷ್ಟು ಪರಿಹಾರ ಸಾಮಗ್ರಿಗಳನ್ನು ಹಗ್ಗದ ಮೂಲಕ ಇಳಿಸಲಾಗಿದೆ.
Kshetra Samachara
21/07/2022 08:41 pm