ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬುದ್ದಿಮಾಂದ್ಯ ಮಗ ನಾಪತ್ತೆ

ಬುದ್ಧಿಮಾಂದ್ಯ ಮಗ ನಾಪತ್ತೆಯಾಗಿದ್ದು ಮಗನಿಗಾಗಿ ಪೋಷಕರು ಅಲೆದಾಟ ನಡೆಸಿದ್ದಾರೆ. ಒರಿಸ್ಸಾ ಮೂಲದ ಪ್ರಸನ್ಜೀತ್ ದಾಸ್ (12) ಎಂಬ ಬಾಲಕ ನಾಪತ್ತೆಯಾಗಿದ್ದಾನೆ. ಬಾಲಕನನ್ನ ಒರಿಸ್ಸಾದ ಬಾದ್ರಕ್‌ನಿಂದ ಬೆಂಗಳೂರಿನ ನಿಮಾನ್ಸ್‌ಗೆ ಚಿಕಿತ್ಸೆಗಾಗಿ ಪೋಷಕರು ಕರೆತಂದಿದ್ದರು. ಆಗಸ್ಟ್ 9ರಂದು ಬೆಂಗಳೂರಿಗೆ ಬಂದಿದ್ರು. ಸಿದ್ಧಾಪುರ ಠಾಣಾ ವ್ಯಾಪ್ತಿಯ ಎಸ್.ಎಸ್.ಲಾಡ್ಜ್ ನಲ್ಲಿ ರೂಮ್ ಪಡೆದಿದ್ದರು. ನಿನ್ನೆ ರಾತ್ರಿ ರೂಮಿನಿಂದ ಬಾಲಕ ತಪ್ಪಿಸಿಕೊಂಡಿದ್ದಾನೆ. ಇನ್ನು ಮಗನ ಪತ್ತೆಗಾಗಿ ಪೋಷಕರು ಅಲೆದಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಬಾಲಕನನ್ನ ಕಂಡಲ್ಲಿ (8792559232 - ಅಬ್ದುಲ್) ನಂಬರ್‌ಗೆ ಕರೆ ಮಾಡುವಂತೆ ಮನವಿಮಾಡಿಕೊಂಡಿದ್ದಾರೆ.

Edited By :
PublicNext

PublicNext

13/08/2022 04:17 pm

Cinque Terre

21.14 K

Cinque Terre

0

ಸಂಬಂಧಿತ ಸುದ್ದಿ