ಬೆಂಗಳೂರು- ಇಂದಿನಿಂದ ಹರ್ ಘರ್ ಅಭಿಯಾನ ನಡೆಯುತ್ತಿದ್ದು,ಮನೆಮನೆಯಲ್ಲಿ ಭಗವಧ್ವಜ ಹಾರಿಸುವಂತೆ ಜಾಗೃತಿ ಮೂಡಿಸಲಾಗ್ತಿದೆ.ಹಿಂದೂ ಜನಜಾಗೃತಿ ಸಮಿತಿಗೆ 20 ವರ್ಷ ಆಗಿರುವುದರಿಂದ ಹರ್ ಘರ್ ಭಗವಾ ಅಭಿಯಾನ ಹಿಂದೂ ಜನಜಾಗೃತಿ ಸಮಿತಿ ಆರಂಭಿಸಿದೆ.
ವಿಜಯನಗರದ ಗೀತಾ ಮಂದಿರದಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು,ಪ್ರತಿಮನೆಯಲ್ಲೂ ಭಗಧ್ವಜ ಹಾರಿಸುವಂತೆ ಅಭಿಯಾನ ಶುರುಮಾಡಲಾಗಿದೆ.ಅಕ್ಟೋಬರ್ 3 ರಿಂದ 5 ರವರೆಗೆ ಅಭಿಯಾನ ನಡೆಯಲಿದೆ.ಈಗಾಗಲೇ ಈ ಬಗ್ಗೆ ಟ್ವಿಟರ್ ನಲ್ಲಿ ಅಭಿಯಾನ ಆರಂಭ ಮಾಡಲಾಗಿದೆ.ಒಂದು ಕೋಟಿ ಹಿಂದೂಗಳ ಮನೆ ಮೇಲೆ ಹರ್ ಘರ್ ಭಗವಾ ಹಾರಿಸಲು ಪ್ಲ್ಯಾನ್ ನಡೆಯುತ್ತಿದೆ.ರಾಜ್ಯದ 500 ಕ್ಕೂ ಅಧಿಕ ದೇವಸ್ಥಾನಗಳಲ್ಲಿ ಧರ್ಮ ರಕ್ಷಣೆಗಾಗಿ ಪ್ರತಿಜ್ಞೆ ಕೈಗೊಂಡಿದ್ದು,ಹಿಂದೂ ಜನಜಾಗೃತಿ ಸಮಿತಿ ಮೋಹನ್ ಗೌಡ ನೇತೃತ್ವದಲ್ಲಿ ಅಭಿಯಾನ ಆರಂಭವಾಗಿದೆ.ಶ್ರೀಕೃಷ್ಣ, ಶ್ರೀ ರಾಮನ ಪ್ರಾರ್ಥನೆ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.
Kshetra Samachara
03/10/2022 01:13 pm