ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ನಾಡಹಬ್ಬ ಮೈಸೂರು ದಸರಾ ಅಂಗವಾಗಿ ಕನ್ವೆನ್ಷನ್ ಸೆಂಟರ್‌ನಲ್ಲಿ ಉರ್ದು ಕವಿಗೋಷ್ಟಿ

ಮೈಸೂರು-ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಉರ್ದು ಕವಿಗೋಷ್ಟಿಯನ್ನು ಏರ್ಪಡಿಸಲಾಗಿದೆ ಎಂದು ಮಾಜಿ ನಗರಪಾಲಿಕೆ ಸದಸ್ಯ, ಸಮಿತಿ ಅಧ್ಯಕ್ಷ ಸೋಹೇಲ್ ಬೇಗ್ ತಿಳಿಸಿದರು.

ಮೈಸೂರಿನ ಬನ್ನಿಮಂಟಪದ ಕ್ಲಾಸಿಕ್ ಕನ್ ವೆನ್ಷನ್ ಹಾಲ್ ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಅಖಿಲ ಭಾರತ ರಾಷ್ಟ್ರೀಯ ಏಕೀಕರಣ ಮುಷೈರಾವನ್ನು ಗುರುವಾರ 29 ಸೆಪ್ಟೆಂಬರ್ ನಲ್ಲಿ ಸಂಜೆ 7 ರಿಂದ ಮೈಸೂರಿನ ಬನ್ನಿಮಂಟಪ ನಲ್ಲಿರುವ ಬೆಂಗಳೂರು ಮೈಸೂರು ರಸ್ತೆಯಲ್ಲಿರುವ ಕ್ಲಾಸಿಕ್ ಕನ್ವೆನ್ಷನ್ ಸೆಂಟರ್‌ನಲ್ಲಿ ಉರ್ದು ಕವಿಗೋಷ್ಟಿ ಏರ್ಪಡಿಸಲಾಗಿದೆ,ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ ಸೋಮಶೇಖರ್ ಅವರು ಉದ್ಘಾಟಿಸಲಿದ್ದಾರೆ . ಮಾಜಿ ಸಚಿವ ಹಾಗೂ ಎಂಎಲ್ ಎ ತನ್ವೀರ್ ಸೇಠ್ ಅಧ್ಯಕ್ಷತೆ ವಹಿಸಲಿದ್ದು , ಕೆ.ಆರ್ . ಕ್ಷೇತ್ರದ ಎಂ.ಎಲ್.ಎ ಶ್ರೀ ಎಸ್.ಎ.ರಾಮದಾಸ್ ಮತ್ತು ವರುಣಾ ಕ್ಷೇತ್ರದ ಎಂ.ಎಲ್.ಎ. ಯತೀಂದ್ರ ಸಿದ್ದರಾಮಯ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಅಂತರಾಷ್ಟ್ರೀಯ ಪ್ರಸಿದ್ಧ ಉರ್ದು ಲೇಖಕಿ , ಕವಯಿತ್ರಿ ಮತ್ತು ಚಲನಚಿತ್ರ ನಟಿ ಲತಾ ಹಯಾ ಅವರು ತಮ್ಮ ಕವನಗಳನ್ನು ಪ್ರಸ್ತುತಪಡಿಸಲಿದ್ದಾರೆ ಎಂದು ತಿಳಿಸಿದರು.

Edited By : PublicNext Desk
Kshetra Samachara

Kshetra Samachara

27/09/2022 08:52 pm

Cinque Terre

1.41 K

Cinque Terre

0

ಸಂಬಂಧಿತ ಸುದ್ದಿ