ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಏರ್‌ಪೋರ್ಟ್‌ನಲ್ಲಿ ಪ್ರಸಾದದ ತೆಂಗಿನಕಾಯಿ ಜೊತೆ ಪ್ರಯಾಣಿಕನನ್ನ ತಡೆದ ಭದ್ರತಾ ಸಿಬ್ಬಂದಿ

ದೇವನಹಳ್ಳಿ: ದೇವನಹಳ್ಳಿಯ ಕೆಂಪೇಗೌಡ ವಿಮಾನದಲ್ಲಿ ನಿಲ್ದಾಣದಲ್ಲಿ ಪ್ರಸಾದದ ತೆಂಗಿನಕಾಯಿ ಭಾಗ ತೆಗೆದುಕೊಂಡು ಹೋಗಲು ನಿರಾಕರಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ರಾಹ್ಯದ ತಲಕಾವೇರಿ ದೇವಸ್ಥಾನದಲ್ಲಿ ಪೂಜೆ ನಂತರ ಪ್ರಸಾದವಾಗಿ ನೀಡಿದ ಅರ್ಧ ತೆಂಗಿನಕಾಯಿ ಭಾಗವನ್ನು ವಿಮಾನದಲ್ಲಿ ತೆಗೆದುಕೊಂಡೋಗಲು ಕೆಐಎಎನಲ್ಲಿ ನಿರಾಕರಿಸಿದ್ದಾರೆ.

ದೆಹಲಿ ಮೂಲದ ಸಂತನು ಗಂಗೂಲಿ ಆಗಸ್ಟ್ 24ರಂದು ಏರ್ ವಿಸ್ತಾರಾ ವಿಮಾನದಲ್ಲಿ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ದೆಹಲಿಗೆ ಪ್ರಯಾಣಿಸಲು ಹೊರಟಿದ್ರು. ಈ ವೇಳೆ ಸಿಐಎಸ್​ಎಫ್​ ಸಿಬ್ಬಂದಿ ತಪಾಸಣೆ ನಡೆಸಿ ಅವರ ಬ್ಯಾಗ್​​ನಲ್ಲಿದ್ದ ಅರ್ಧ ತೆಂಗಿನಕಾಯಿ ಭಾಗನ ತೆಗೆದುಕೊಂಡೋಗಲು ನಿರಾಕರಿಸಿದರು. ಒಣ ತೆಂಗಿನಕಾಯಿನ ವಿಮಾನದಲ್ಲಿ ತೆಗೆದುಕೊಂಡೋಗಲು ಅವಕಾಶವಿರಲಿಲ್ಲ.

ಸಂತನೂ ಗಂಗೂಲಿ ತಲಕಾವೇರಿಗೆ ಭೇಟಿ ನೀಡಿದ ಸಮಯದಲ್ಲಿ ಪೂಜೆ ಮಾಡಿಸಿದ್ದರು. ಆಗ ಪ್ರಸಾದವಾಗಿ ಅರ್ಧ ತೆಂಗಿನಕಾಯಿ ಹೋಳು, ಹೂವು ಸಿಹಿ ತಿಂಡಿ ನೀಡಲಾಗಿತ್ತು. ಪ್ರಸಾದನ ಕುಟುಂಬ ಮತ್ತು ಸ್ನೇಹಿತರಿಗೆ ನೀಡೊ ಉದ್ದೇಶದಿಂದ ಅರ್ಧ ತೆಂಗಿನಕಾಯಿ ಜೊತೆ ಪ್ರಯಾಣಿಸಲು ಸಿದ್ಧರಾಗಿದ್ರು. ಪ್ರಸಾದವಾಗಿ ನೀಡಿದ ತೆಂಗಿನಕಾಯಿ ಮೇಲಿದ್ದ ದೈವಿಕ ನಂಬಿಕೆ ಮತ್ತು ಹಸಿ ತೆಂಗಿನಕಾಯಿ ಆದ ಕಾರಣ ತೆಗೆದುಕೊಂಡೋಗಲು ಅನುಮತಿ ನೀಡಲಾಗಿದೆ.

Edited By : Nagaraj Tulugeri
Kshetra Samachara

Kshetra Samachara

11/09/2022 01:58 pm

Cinque Terre

1.97 K

Cinque Terre

0

ಸಂಬಂಧಿತ ಸುದ್ದಿ