ಬೆಂಗಳೂರು: ನೆರೆ ಬಂದು ಜನ ತೊಂದರೆಯಲ್ಲಿದ್ದಾಗ ಹೋಟೆಲ್ ನಲ್ಲಿ ದೋಸೆ ಸವಿಯುತ್ತಿದ್ದ ಸಂಸದ ತೇಜಸ್ವಿ ಸೂರ್ಯ ವಿರುದ್ದ ಕಾಂಗ್ರೆಸ್ ಕಾರ್ಯಕರ್ತರು ಕಿಡಿಕಾರಿದ್ದಾರೆ. ಅಲ್ಲದೇ ಇದಕ್ಕೆ ವ್ಯಂಗ್ಯವಾಗಿ ಪ್ರತಿಕ್ರಿಯಿಸುತ್ತಿರುವ ಕಾಂಗ್ರೆಸ್ ಕಾರ್ಯಕರ್ತರು ಸಂಸದ ತೇಜಸ್ವಿ ಸೂರ್ಯ ಮನೆಗೆ ಮಸಾಲೆ ದೋಸೆ ಪಾರ್ಸಲ್ ಮಾಡಿದ್ದಾರೆ. ನಾಲ್ಕೈದು ಹೋಟೆಲ್ ನ ವೆರೈಟಿ ವೆರೈಟಿ ದೋಸೆಯನ್ನ ಕಾಂಗ್ರೆಸ್ ಕಾರ್ಯಕರ್ತರು ಪಾರ್ಸಲ್ ಮಾಡಿದ್ದಾರೆ.
ವಿದ್ಯಾರ್ಥಿ ಭವನ ಮಸಾಲೆ ದೋಸೆ, ನ್ಯೂ ಸಾಗರ್, ದಾವಣಗೆರೆ ಬೆಣ್ಣೆ ದೋಸೆ, ಮೌರ್ಯ ಹೋಟೆಲ್ ದೋಸೆ, ಸಿಟಿಆರ್ ಹೋಟೆಲ್ ದೋಸೆ, ಮಸಾಲೆ ದೋಸೆ, ಪುಡಿ ಮಸಾಲೆ ದೋಸೆ, ಪೇಪರ್ ದೋಸೆ, ಬೆಣ್ಣೆ ಮಸಾಲೆ ದೋಸೆ, ಸೆಟ್ ದೋಸೆ, ಈರುಳ್ಳಿ ದೋಸೆ, ಹೀಗೆ ವೈರೆಟಿ ವೈರೆಟಿ ದೋಸೆಗಳನ್ನ 190 ರೂಪಾಯಿ ಪಾವತಿಸಿ ಡೆಂಝೋ ಮೂಲಕ ಕಾಂಗ್ರೆಸ್ ಕಾರ್ಯಕರ್ತರು ಪಾರ್ಸಲ್ ಕಳುಹಿಸಿದ್ದಾರೆ. ಕಾಂಗ್ರೆಸ್ ಮುಖಂಡ ಮನೋಹರ್ ನೇತೃತ್ವದಲ್ಲಿ ದೋಸೆ ಪಾರ್ಸೆಲ್ ಕಳಿಸುವ ಕಾರ್ಯ ನಡೆದಿದೆ.
ರೇಸ್ ಕೋರ್ಸ್ ಕಾಂಗ್ರೆಸ್ ಭವನದಿಂದ, ಜಯನಗರ ಸಂಸದರ ಕಚೇರಿಗೆ ಕಾಂಗ್ರೆಸ್ ಕಾರ್ಯಕರ್ತರು ದೋಸೆ ಪಾರ್ಸಲ್ ಮಾಡಿದಾರೆ.
PublicNext
10/09/2022 03:23 pm