ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಜನಸ್ಪಂದನ ಕಾರ್ಯಕ್ರಮ ಜೆ.ಪಿ.ನಡ್ಡಾ ಬದಲು ಸ್ಮೃತಿ ಇರಾನಿ ಭಾಗಿ

ದೊಡ್ಡಬಳ್ಳಾಪುರ : ಪದೇ ಪದೇ ಮುಂದೂಡಿಕೆಯಾಗುತ್ತಿದ್ದ ಬಿಜೆಪಿ ಪಕ್ಷದ ಜನಸ್ಪಂದನ ಕಾರ್ಯಕ್ರಮ ನಾಳೆ ನಡೆಯುತ್ತಿದ್ದು, ಕಾರ್ಯಕ್ರಮದಲ್ಲಿ 3 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ, ಕಾರ್ಯಕ್ರಮಕ್ಕೆ ಜನರನ್ನು ಕರೆತರಲು 5 ಸಾವಿರ ಬಸ್ ಗಳನ್ನ ಬಳಸಲಾಗಿದೆ.

ನಾಳೆ ನಡೆಯುವ ಜನಸ್ಪಂದನ ಕುರಿತು ಕಾರ್ಯಕ್ರಮದ ವೇದಿಕೆಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ. ಸುಧಾಕರ್ ಛತ್ತೀಸ್'ಘಡದಲ್ಲಿ ರಾಷ್ಟ್ರಿಯ ಮಟ್ಟದ ಕಾರ್ಯಕ್ರಮದಲ್ಲಿ‌ ಜೆ.ಪಿ.ನಡ್ಡಾ ಭಾಗವಹಿಸುವುದು ಅನಿವಾರ್ಯ ಆಗಿರುವುದರಿಂದ ಅವರ ಆಗಮನ ಖಾತ್ರಿಯಾಗಿಲ್ಲ. ಬದಲಿಗೆ ಹಿರಿಯ ಕೇಂದ್ರ ಸಚಿವರಾದ ಸ್ಮೃತಿ ಇರಾನಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಈ ಕಾರ್ಯಕ್ರಮಕ್ಕಾಗಿ 40 ಎಕರೆ ವಿಸ್ತೀರ್ಣದಲ್ಲಿ‌ ಜರ್ಮನ್ ಶೆಡ್ ನಿರ್ಮಿಸಲಾಗಿದೆ. 3 ಲಕ್ಷ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ, ಕಾರ್ಯಕ್ರಮ ನಡೆಯುವ ಸ್ಥಳದಿಂದ ಒಂದು ಕಿ.ಮೀ. ಅಂತರದಲ್ಲಿ ಎರಡೂ ಕಡೆ ಒಟ್ಟು 12 ಜಾಗಗಳಲ್ಲಿ ಒಟ್ಟು 200 ಎಕರೆ ವಿಸ್ತೀರ್ಣದಲ್ಲಿ ಪಾರ್ಕಿಂಗ್ ವ್ಯವಸ್ಥೆ‌ ಮಾಡಲಾಗಿದೆ. ಜನರನ್ನು ಕರೆತರಲು ಒಟ್ಟು 5000 ಖಾಸಗಿ ಹಾಗೂ ಸರ್ಕಾರಿ ಬಸ್'ಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದರು.

Edited By : Nagesh Gaonkar
PublicNext

PublicNext

09/09/2022 07:02 pm

Cinque Terre

33.9 K

Cinque Terre

0

ಸಂಬಂಧಿತ ಸುದ್ದಿ