ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಮಾಜಿ ಸಿಎಂ ಸಿದ್ದು ಭೇಟಿ

ಬೆಂಗಳೂರು: ಮಳೆಯಿಂದಾಗಿ ಹಾನಿಗೊಳಗಾದ ಬೆಂಗಳೂರಿನ ಮಹದೇವಪುರ ಕ್ಷೇತ್ರದ ಬೆಳ್ಳಂದೂರು, ಇಕೋ ಸ್ಪೇಸ್, ಯಮಲೂರು ಸೇರಿದಂತೆ ಹಲವಡೆ ಹಾನಿಗೊಳಗಾದ ಭಾಗಗಳಿಗೆ ಮಾಜಿ ಸಿಎಂ ಸಿದ್ಧರಾಮಯಯ್ಯ ಸಂಚರಿಸಿ ಜನರ ಅಹವಾಲು ಸ್ವೀಕರಿಸಿದರು..

ಬಳಿಕ ಮಾತನಾಡಿದ ಅವರು ರಾಜ್ಯ ಸರ್ಕಾರವು ಮೂರು ವರ್ಷಗಳಿಂದ ಬೆಂಗಳೂರಿನ ಅಭಿವೃದ್ಧಿಗೆ ಯಾವುದೇ ಕ್ರಿಯಾ ಯೋಜನೆ ಕೈಗೊಳ್ಳುತ್ತಿಲ್ಲ.. ಯಮಲೂರಿನಲ್ಲಿ ರಸ್ತೆಗಳಲ್ಲಿ ೪ ರಿಂದ ೫ ಅಡಿ ನೀರು ನಿಂತಿದ್ದು, ಮಳೆ ಬಂದಾಗ ೧೦ ರಿಂದ ೧೨ ಅಡಿ ನೀರು ನಿಲ್ಲುತ್ತಿದೆ. ಇದರಿಂದ ವಸತಿ ಪ್ರದೇಶಗಳಲ್ಲಿ ಜನರು ಬೋಟ್‌ನಲ್ಲಿ ತಿರುಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು

ಕಾಂಗ್ರೆಸ್ ಸರ್ಕಾರದ ಸಾಧನೆ ಹಾಗೂ ಬಿಜೆಪಿ ಸರ್ಕಾರದ ಕಾರ್ಯಗಳನ್ನು ಜನರ ಮುಂದೆ ತನ್ನಿ ಎಂದು ರಾಜ್ಯ ಸರ್ಕಾರಕ್ಕೆ ಸವಾಲು ಹಾಕಿದರು..ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಸೇರಿದಂತೆ ಸ್ಥಳೀಯ ಮುಖಂಡರು ಹಾಜರಿದ್ದರು..

Edited By : Nagesh Gaonkar
PublicNext

PublicNext

08/09/2022 09:45 pm

Cinque Terre

47.97 K

Cinque Terre

2

ಸಂಬಂಧಿತ ಸುದ್ದಿ