ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಿಬಿಎಂಪಿ ವಿರುದ್ಧ ರೊಚ್ಚಿಗೆದ್ದ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದಲ್ಲಿ ಧರಣಿ

ಕೆಂಗೇರಿ: ಶಿಕ್ಷಕ ,ಶಿಕ್ಷಕೇತರ ಮತ್ತು ವಿದ್ಯಾರ್ಥಿ ಸಂಘದ ವತಿಯಿಂದ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆದಿದೆ. ದೇವಸ್ಥಾನ ನಿರ್ಮಾಣ ವಿವಾದವೇ ಪ್ರತಿಭಟನೆಗೆ ಕಾರಣವಾಗಿದೆ. ಸೂಕ್ತ ಸ್ಥಳ ಗುರಿತಿಸಿದ ಬಳಿಕ ದೇವಸ್ಥಾನ ನಿರ್ಮಿಸುವಂತೆ ಪ್ರತಿಭಟನಾಕಾರರು ಒತಾಯಿಸಿದ್ದಾರೆ. ವಿವಿಯಿಂದ ಸೂಕ್ತ ಸ್ಥಳ ಪಡೆಯದೇ ದೇವಸ್ಥಾನವನ್ನ ಬಿಬಿಎಂಪಿ ನಿರ್ಮಿಸುತ್ತಿದೆ. ಬೆಂವಿವಿಯಿಂದ ಕಾನೂನು ರೀತ್ಯ ಸ್ಥಳ ಪಡೆದುಕೊಳ್ಳದೇ ದೇವಸ್ಥಾನ ನಿರ್ಮಾಣಕ್ಕೆ ಬಿಬಿಎಂಪಿ ಮುಂದಾಗಿದೆ. ಇದರಿಂದಾಗಿ ವಿವಿಯ ಎಲ್ಲ ಸಂಘಟನೆಗಳು ಬೀದಿಗಿಳಿದಿದೆ.

ಗ್ರೇಡ್ ಸಪರೇಟರ್ ನಿರ್ಮಾಣದ ಹೆಸರಲ್ಲಿ ದೇವಸ್ಥಾನದ ಶೇಕಡ 30ರಷ್ಟು ತೆರವುಗೊಳಿಸಲಾಗುತ್ತಿದೆ. ಇದಕ್ಕಾಗಿ ಬದಲಿ ಸ್ಥಳ ನೀಡಲು ರಾಜ್ಯ ಸರ್ಕಾರ ತಿಳಿಸಿದೆ. ವಿಶ್ವವಿದ್ಯಾಲಯ ಸೂಕ್ತ ಸ್ಥಳ ಸೂಚಿಸುವ ಮುನ್ನವೇ ಪೊಲೀಸ್ ಬಂದೋಬಸ್ತ್ ಜೊತೆಗೆ ಕಾಮಗಾರಿಯನ್ನ ಬಿಬಿಎಂಪಿ ನಡೆಸುತ್ತಿದೆ. ಸದ್ಯ ಸೂಕ್ತ ಜಾಗ ಗುರುತಿಸಿ ಕೊಡುವ ತನಕ ಕಾಮಗಾರಿ ನಿಲ್ಲಿಸುವಂತೆ ಸಂಘಟನೆಗಳು ಒತ್ತಾಯಿಸಿದೆ.

Edited By : Shivu K
Kshetra Samachara

Kshetra Samachara

08/09/2022 01:18 pm

Cinque Terre

1.68 K

Cinque Terre

0

ಸಂಬಂಧಿತ ಸುದ್ದಿ