ಬೆಂಗಳೂರು: ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಚಿವ ಆರ್. ಅಶೋಕ್ ನಿದ್ದೆಗೆ ಜಾರಿರುವ ಬಗ್ಗೆ ಕಾಂಗ್ರೆಸ್ ವ್ಯಂಗ್ಯವಾಡಿದ್ದಾರೆ.
ಮುಳುಗುವುದರಲ್ಲಿ ಹಲವು ವಿಧಗಳಿವೆ. ರಾಜ್ಯದ ಜನ ಮಳೆಯಲ್ಲಿ ಮುಳುಗಿದ್ದಾರೆ. ಸಚಿವರು ನಿದ್ದೆಯಲ್ಲಿ ಮುಳುಗಿದ್ದಾರೆ. ಪ್ರವಾಹ ಪರಿಶೀಲನೆಯ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಸಚಿವ ಆರ್ ಅಶೋಕ್ ಭರ್ಜರಿ ನಿದ್ದೆಗೆ ಜಾರಿದ್ದಾರೆ. ಹಲಾಲ್ ಕಟ್ ಎಂದರೆ ಥಟ್ಟನೆ ಎಚ್ಚರಾಗುತ್ತಾರೆ. ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ ಎಂಬ ಮಾತು ಸಚಿವರಿಗೆ ಹೇಳಿದ್ದೇನೋ? ಅಂತಾ ಟ್ವೀಟ್ ಮೂಲಕ ಕಾಂಗ್ರೆಸ್ ಕಿಡಿಕಾರಿದೆ.
PublicNext
06/09/2022 01:40 pm