ವರದಿ: ಬಲರಾಮ್ ವಿ.
ಬೆಂಗಳೂರು: ಮನವಿ ನೀಡಲು ಬಂದ ಮಹಿಳೆಯೋರ್ವಳ ಮೇಲೆ ಮಹದೇವಪುರ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿಯ ಉಡಾಫೆ ಹೇಳಿಕೆಯನ್ನು ಖಂಡಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ವತಿಯಿಂದ ಕೆಆರ್ ಪುರದ ಬಿಬಿಎಂಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಬಳಿಕ ಮಾತನಾಡಿದ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಗೌರಮ್ಮ, ಶಾಸಕರಿಗೆ ಮನವಿ ಸಲ್ಲಿಸಲು ಬಂದ ಮಹಿಳೆ ವಿರುದ್ಧ ಲಿಂಬಾವಳಿ ಏಕವಚನದಲ್ಲೇ ಮಾತನಾಡಿದ್ದಲ್ಲದೆ, ಆಕೆಯನ್ನು ರೇಪ್ ಮಾಡಿದ್ದೇನೆಯೇ? ಎನ್ನುವ ಮೂಲಕ ತಮ್ಮ ಪಕ್ಷದ ಸಂಸ್ಕೃತಿಯನ್ನು ತೋರಿಸಿದ್ದಾರೆ ಎಂದು ಶಾಸಕರ ವಿರುದ್ಧ ಹರಿಹಾಯ್ದರು.
ಪ್ರಭಾವಿಗಳು ಮಾಡಿರುವ ಜಾಗ ಒತ್ತುವರಿ ಮೊದಲು ತೆರವುಗೊಳಿಸಿ. ತದನಂತರ ಸಾಮಾನ್ಯರನ್ನು ತೆರವುಗೊಳಿಸುವಂತೆ ಆಗ್ರಹಿಸಿದರು. ಮಹಿಳೆಗೆ ನಿಂದನೆ ಮಾಡಿದ ಶಾಸಕರು ಕೂಡಲೇ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಆಗ್ರಹಿಸಿದರು.
PublicNext
04/09/2022 07:01 pm