ಬೆಂಗಳೂರು: ಇವತ್ತಿನ ಸಭೆ ವಿಧಾನ ಸಭೆ ತಯಾರಿ ದೃಷ್ಟಿಯಿಂದ ನಡೆಯುತ್ತಿದೆ, ಎಂದು ಈಶ್ವರಪ್ಪ ಬಿಜೆಪಿ ಕಛೇರಿಯಲ್ಲಿ ಹೇಳಿದ್ದಾರೆ. ಅಷ್ಟೇ ಅಲ್ಲದೆ ಹೆಚ್ಚು ಸೀಟು ಗೆಲ್ಲಬೇಕು ಅಂತ ಮೋದಿ,ಅಮಿತ್ ಶಾ ಅವರು ಹೇಳಿದ್ದಾರೆ. ಹೀಗಾಗಿ ಹಿಂದುಳಿದ ವರ್ಗಗಳ ಸಮಾವೇಶ, ಯುವಕರ, ಮಹಿಳೆಯರ ಜಾಗೃತಿ ಬಗ್ಗೆ ಚರ್ಚೆಯಾಗುತ್ತದೆ. ಜೊತೆಗೆ 150 ಸೀಟು ಗೆಲ್ಲುವ ಬಗ್ಗೆ ಚರ್ಚೆ ಕೂಡ ಮಾಡ್ತಿರುವುದಾಗಿ ಹೇಳಿದ್ದಾರೆ
ಇನ್ನು ಇದೇ ವೇಳೆ ಅರವಿಂದ ಲಿಂಬಾವಳಿ ಮಹಿಳೆಗೆ ನಿಂಧಿಸಿದ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ, ಈ ಬಗ್ಗೆ ಗೊತ್ತಿಲ್ಲ. ಪೇಪರಲ್ಲಿ ನೋಡಿದ್ದಿನಿ ಅಷ್ಟೇ ಎಂದು ಈಶ್ವರಪ್ಪ ಹೇಳಿದ್ದಾರೆ.
PublicNext
04/09/2022 03:05 pm