ಶಾಂತಿನಗರ: ಕಳೆದ ವೀಕೆಂಡ್‌ನಲ್ಲಿ ಬ್ರಿಗೇಡ್ ರಸ್ತೆಯಲ್ಲಿ ಪೊಲೀಸರ ಜೊತೆ ಗಲಾಟೆ ಮಾಡಿ ಅವರ ಮೇಲೆ ಹಲ್ಲೆ ನಡೆಸಿದ್ದ ವಿದೇಶಿ ಮಹಿಳೆಯನ್ನ ಅಶೋಕನಗರ ಪೊಲೀಸರು ಬಂಧಿಸಿದ್ದಾರೆ.
ಅಶೋಕನಗರ ಪೊಲೀಸ್‌ರಿಂದ ಸದ್ಯ ಓರ್ವ ವಿದೇಶಿ ಮಹಿಳೆ ಬಂಧನವಾಗಿದ್ದು, ಬಂಧಿತ ಮಹಿಳೆಯನ್ನ ಜುಲಿಯೋ ವೆಂಜಿರೋ ಎಂದು ಗುರುತಿಸಲಾಗಿದೆ. ಹಲ್ಲೆ ಬಳಿಕ ವಿಗ್ ಹಾಕಿಕೊಂಡು ತಲೆಮರೆಸಿಕೊಂಡಿದ್ದ ಆರೋಪಿ ವೀಸಾ ಅವಧಿ ಮುಗಿದಿದ್ದರು ಅಕ್ರಮವಾಗಿ ನಗರದಲ್ಲಿ ನೆಲಸಿರೋದು ತನಿಖೆಯಲ್ಲಿ ಪತ್ತೆಯಾಗಿದೆ.
ಕುಡಿತದ ನಶೆಯಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿದ್ದ ಮಹಿಳೆಟೂರಿಸ್ಟ್ ವೀಸಾದಲ್ಲಿ ನಗರಕ್ಕೆ ಬಂದಿದ್ಳು. ನಂತರ ವಾಪಸ್ಸಾಗದೇ ಇಲ್ಲೆ ಉಳಿದಿದ್ದಾಳೆ. ಸದ್ಯ ಈಕೆಯ ಸ್ನೇಹಿತೆ ಪರಾರಿಯಾಗಿದ್ದು ಆಕೆಗೂ ಪೊಲೀಸರು ಹುಡುಕಾಟ ನಡೆಸಿದ್ದಾರೆ.
PublicNext
01/09/2022 09:20 pm