ಹೊಸಕೋಟೆ: ಅತಿಯಾದ ಮಳೆಯಿಂದ ಹೊಸಕೋಟೆ ತಾಲೂಕು ಸೂಲಿಬೆಲೆ ಹೋಬಳಿಯ ಸೊಣ್ಣೆಹಳ್ಳಿಪುರ ಗ್ರಾಮದ ಬಸವರಾಜಯ್ಯ ಮನೆ ಗೋಡೆ ಕುಸಿದು ಸಾವನ್ನಪ್ಪಿದ್ದರು. ನಿನ್ನೆ ಒಂದು ಗಂಟೆಗೆ ದುರಂತ ನಡೆದಿದ್ದು, ತಹಶೀಲ್ದಾರ್ ಮಹೇಶ್ ಕುಮಾರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸೂಲಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇಂದು ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ದುರಂತ ನಡೆದ ಸೊಣ್ಣೆಹಳ್ಳಿಪುರದ ಬಸವರಾಜ್ ಅವರ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಈ ವೇಳೆ ಬಸವರಾಜಯ್ಯ ಅವರ ಕುಟುಂಬಕ್ಕೆ 50,000 ರೂಪಾಯಿಗಳ ಆರ್ಥಿಕ ನೆರವು ನೀಡಿದರು.
ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ಹೊಸಕೋಟೆ..
Kshetra Samachara
31/08/2022 11:35 am