ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕಾಂಗ್ರೆಸ್ ಪಾದಯಾತ್ರೆಗೆ ಕೈ ನಾಯಕರ ಸಕಲ ಸಿದ್ಧತೆ

ಬೆಂಗಳೂರು: ಕೋಮುವಾದಿಗಳ ಕೈಗೆ ಅಧಿಕಾರ ಸಿಕ್ಕಮೇಲೆ ಸಮಾಜ ಒಡೆಯುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದಕ್ಕಾಗಿ ಕಾಂಗ್ರೆಸ್ ಪಕ್ಷ ದೇಶವನ್ನ ಒಗ್ಗೂಡಿಸುವಂತಹ ಪ್ರಯತ್ನ ಮಾಡಬೇಕಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸ್ವಾತಂತ್ರ್ಯ, ಸಮಾನತೆ, ಬ್ರಾತೃತ್ವವನ್ನ ಬೇರ್ಪಡಿಸಲು ಸಾಧ್ಯವಿಲ್ಲ. ದೇಶದಲ್ಲಿ ಐಕ್ಯತೆಯನ್ನ ಉಳಿಸಲು 3500 ಕಿ.ಮೀ ಪಾದಯಾತ್ರೆ ನಡೆಯುತ್ತಿದೆ. 511 ಕಿ.ಮೀ ಕರ್ನಾಟಕದಲ್ಲಿ ಪಾದಯಾತ್ರೆ ನಡೆಯುತ್ತಿದೆ. ರಾಹುಲ್ ಗಾಂಧಿ ಅವರ ಜೊತೆಗೆ 150 ಜನ ಪಾದಯಾತ್ರೆ ಮಾಡ್ತಾರೆ. ಒಟ್ಟು 300 ಜನ ರಾಹುಲ್ ಗಾಂಧಿ ಜೊತೆಗೆ ಪಾದಯಾತ್ರೆ ಮಾಡುತ್ತಾರೆ. ನಾವು ಎಲ್ಲಾರೂ ಈ ಪಾದಯಾತ್ರೆ ಮಾಡುತ್ತೇವೆ. ಸೆಪ್ಟೆಂಬರ್‌ 7 ರಂದು ಪ್ರಾರಂಭವಾಗಿ 30ರಂದು ಮೈಸೂರಿಗೆ ರಾಹುಲ್ ಗಾಂಧಿ ಬರ್ತಾರೆ. ರಾಹುಲ್ ಗಾಂಧಿಯವರು 150 ದಿನ, ಒಟ್ಟು 3,500 ಕಿ.ಮೀ ಪಾದಯಾತ್ರೆಯಲ್ಲಿ ಭಾಗವಹಿಸುತ್ತಾರೆ. ಜನರಲ್ಲಿ ಹೊಸ ಭರವಸೆಯನ್ನ ಮೂಡಿಸುವ ಕೆಲಸ ಮಾಡ್ತಾರೆ. ಈ ಸಮಾಜ ಒಟ್ಟಾಗಿ ಬದುಕಬೇಕಾಗಿದೆ. ಈ ಸಂದರ್ಭದಲ್ಲಿ ಐಕ್ಯತೆಯನ್ನ ಸಾರುವ ಪ್ರಾಮಾಣಿಕ ಪ್ರಯತ್ನವಾಗಬೇಕಿದೆ. ಕನ್ನಡದಲ್ಲಿ ನಾವು ಒಂದು ಭಾರತ ಐಕ್ಯತಾ ಯಾತ್ರೆಯ ಹೆಸರಿನಲ್ಲಿ ಲೋಗೋ ಬಿಡುಗಡೆ ಮಾಡಿದ್ದೇವೆ ಎಂದರು.

Edited By : Nagesh Gaonkar
PublicNext

PublicNext

28/08/2022 02:50 pm

Cinque Terre

34.24 K

Cinque Terre

2

ಸಂಬಂಧಿತ ಸುದ್ದಿ