ಬೆಂಗಳೂರು: ಸರ್ಕಾರದ ಮೇಲೆ 40% ಕಮಿಷನ್ ಆರೋಪ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ. ಮೂರ್ಖರು ಮಾತಾಡುತ್ತಾರೆ. ಯಾವನೋ ಒಬ್ಬನಿಗೆ ಹೇಳಿಕೊಟ್ಟು ಮಾತಾಡಿಸಿದ ತಕ್ಷಣ ಸುಳ್ಳು ಸತ್ಯ ಆಗಲು ಸಾಧ್ಯವಿಲ್ಲ ಎಂದಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಲೋಕಾಯುಕ್ತಕ್ಕೆ ಬೇಕಾದರೆ ದೂರು ಕೊಟ್ಟು ತನಿಖೆ ಮಾಡಿಸಲಿ, ಅಭ್ಯಂತರವಿಲ್ಲ. ಸುಮ್ಮನೆ ಅನಗತ್ಯ ಆರೋಪ ಮಾಡಿ ಅದನ್ನು ದೊಡ್ಡದು ಮಾಡುವ ಪ್ರಯತ್ನವನ್ನು ಉದ್ದೇಶಪೂರ್ವಕವಾಗಿ ಸಿದ್ದರಾಮಯ್ಯ ಮಾಡಿಸುತ್ತಿದ್ದಾರೆ. ಬಹುಶಃ ಇದರಿಂದ ಅವರದ್ದು ಏನೂ ನಡೆಯುವುದಿಲ್ಲ. ವಿಧಾನ ಮಂಡಲ ಅಧಿವೇಶನದಲ್ಲಿ ತಕ್ಕ ಉತ್ತರ ನಾವು ಕೊಡುತ್ತೇವೆ. ಸರ್ಕಾರದ ಮೇಲೆ ಯಾವ ಪರಿಣಾಮವೂ ಬೀರಲ್ಲ. ಇದು ಸುಳ್ಳು ಆರೋಪ ಅಂತಾ ಶ್ರೀಸಾಮಾನ್ಯನಿಗೂ ಗೊತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.
PublicNext
27/08/2022 05:35 pm