ಬೆಂಗಳೂರು: ಬಿಜೆಪಿಯಿಂದ ಸಾರ್ವಕರ್ ಫೋಟೋ ಹಂಚಿಕೆ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ಅಭಿವೃದ್ಧಿ ಮಂತ್ರ ಹೇಳಲು ಬಿಜೆಪಿಯವರ ಕಡೆಯಿಂದ ಆಗುತ್ತಿಲ್ಲ. ಅವರು ಮತಗಳ ವಿಂಗಡಣೆ ಮಾಡಬೇಕು. ಗಲಾಟೆ ಮಾಡಿಸಬೇಕು. ಬಾಲಗಂಗಾಧರ ಅವರ ಫೋಟೋ ಹಂಚಿದ್ರೆ ಒಂದು ಅರ್ಥ ಇದೆ.ಅವರು ಗಣೇಶೋತ್ಸವಕ್ಕೆ ಶಕ್ತಿ ತುಂಬಿದವರು. ವಿಘ್ನ ನಿವಾರಣೆ ಮಾಡುವವನು ವಿನಾಯಕ. ಆ ವಿನಾಯಕನಿಗೂ ಸಾರ್ವಕರ್ ಗೂ ಏನು ಸಂಬಂಧ? ಅವರ ಪಾರ್ಟಿ ವಿಚಾರಗಳನ್ನು ಅವರೇ ಡಿ ಗ್ರೇಡ್ ಮಾಡಿಕೊಳ್ಳುತ್ತಿದ್ದಾರೆಂದು ಬಿಜೆಪಿ ವಿರುದ್ಧ ಡಿಕೆಶಿ ವಾಗ್ದಾಳಿ ನಡೆಸಿದ್ದಾರೆ.
ಇನ್ನೂ ಭಾರತ್ ಜೋಡೋ ಯಾತ್ರೆಗೆ ಯಾರು ಯಾರಿಗೆ ಯಾವ ಜವಾಬ್ದಾರಿ ನೀಡಬೇಕು? ಅಸೆಂಬ್ಲಿಯಲ್ಲಿ ಏನು ಮಾಡಬೇಕು ಎಂದು ತೀರ್ಮಾನ ಮಾಡುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. ಸುರ್ಜೇವಾಲಾ ಅವರು 28 ಅಥವಾ 29 ರಂದು ಬರ್ತಾರೆ. 1 ರಂದು ದೆಹಲಿಯಿಂದ ಒಂದು ಟೀಮ್ ಬರುತ್ತೆ. ಮೂರು ಮೀಟಿಂಗ್ ಕರೆದಿದ್ದೇವೆ. 28 ಕ್ಕೆ ನಮ್ಮ ಸಿಎಲ್ಪಿ ಸಭೆ ನಡೆಯಲಿದೆ.ಇದಾದ ಮೇಲೆ ಕೆಪಿಸಿಸಿ ಪದಾಧಿಕಾರಿಗಳು ಸಭೆ ಮಾಡ್ತೇವೆ. ಜೈರಾಮ್ ರಮೇಶ್, ದಿಗ್ವಿಜಯ ಸಿಂಗ್ ಭಾರತ್ ಜೋಡೋ ಯಾತ್ರೆ ಬಗ್ಗೆ ಸಭೆ ಮಾಡ್ತಾರೆ. ನಂತರ ಕೆಪಿಸಿಸಿ ಪದಾಧಿಕಾರಿಗಳ ಜೊತೆ ಸಭೆ ಮಾಡ್ತಾರೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
PublicNext
26/08/2022 03:05 pm