ದೇವನಹಳ್ಳಿ: ದೇವನಹಳ್ಳಿಯ ಚನ್ನರಾಯಪಟ್ಟಣ ರೈತರು ಕಳೆದ 143ದಿನಗಳಿಂದ ಕೆಐಎಡಿಬಿಗೆ ತಮ್ಮ ಜಮೀನು ಕೊಡುವುದಿಲ್ಲ ಎಂದು ಹೋರಾಟ ಮಾಡ್ತಿದ್ದಾರೆ. ಆದರೂ ರೈತರ ಬೇಡಿಕೆಗೆ ಸರ್ಕಾರ ಸ್ಪಂದಿಸದೆ ಜಮೀನು ಸ್ವಾಧೀನಕ್ಕೆ ಮುಂದಾಗಿದೆ. ಇದರ ವಿರುದ್ಧ ದೇವನಹಳ್ಳಿ ಚನ್ನರಾಯಪಟ್ಟಣ ರೈತರ ಹೋರಾಟದಲ್ಲಿ ಹೆಚ್‌ಡಿಕೆ ಭಾಗಿಯಾದರು.
ಇದೇ ವೇಳೆ ಕೇಂದ್ರ ಮತ್ತು ರಾಜ್ಯ ಬಿಜೆಪಿ ತೀವ್ರತರವಾಗಿ ಜನರನ್ನು ಭಾದಿಸುತ್ತಿದೆ. ಇವೆಲ್ಲಾ ಸಮಸ್ಯೆ ನಿವಾರಣೆ ಮಾಡದೆ. ಸಾವರ್ಕರ್ ಹೆಸರೇಳಿಕೊಂಡು ರಾಜಕೀಯ ಮಾಡ್ತಿದ್ದೀರಿ. ಜನರ ಬದುಕಿನ ಸುಧಾರಣೆ ಬದಲಿಗೆ ಜನರ, ರೈತರ ಒಕ್ಕಲೆಬ್ಬಿಸುವ ಕೆಲಸ ಕೈಬಿಡಿ. ದಕ್ಷಿಣ ಭಾರತದ ಬಿಜೆಪಿ ಹೆಬ್ಬಾಗಿಲನ್ನು ಈ ಸಲ ಮುಚ್ಚಿಸಲಾಗುವುದು ಎಂದು ಕುಮಾರಸ್ವಾಮಿ ಸರ್ಕಾರದ ತೀವ್ರ ವಾಗ್ದಾಳಿ ನಡೆಸಿದರು.
PublicNext
26/08/2022 08:13 am