ಬೆಂಗಳೂರು: ಇದ್ದೂ ಇಲ್ಲದಂತೆ, ಬಿಟ್ಟು ಬಿಡದಂತೆ ಮನುಷ್ಯನನ್ನ ಸದಾ ಭಾದಿಸುವ ಕಾಯಿಲೆಗಳಲ್ಲಿ ಕ್ಯಾನ್ಸರ್ ರೋಗವೂ ಒಂದು. ಮಹಿಳೆಯರು ಮತ್ತು ಪುರುಷರನ್ನು ತುಂಬಾ ಮಾರಕವಾಗಿ ಕ್ಯಾನ್ಸರ್ ಭಾದಿಸಿ, ಕೊನೆಗೆ ಬಲಿ ಪಡೆಯುತ್ತದೆ. ಹಿಂದೆ ಚಿಕಿತ್ಸೆಗಳಿಲ್ಲದ ದಿನಗಳಲ್ಲಿ ಕ್ಯಾನ್ಸರ್ ಬಂದರೆ ಸಾವು ಖಚಿತ ಎಂಬ ಮಾತಿತ್ತು. ಈಗ ಕ್ಯಾನ್ಸರ್ ಬಂದರೆ ಪ್ರಾರಂಭಿಕ ಹಂತಗಳಲ್ಲಿ ಗುಣಪಡಿಸಬಹುದು.
ಆದ್ದರಿಂದ ಕ್ಯಾನ್ಸರ್ ರೋಗದ ನಿವಾರಣೆ ಮತ್ತು ಚಿಕಿತ್ಸೆಗಾಗಿ ಯಲಹಂಕದ ನವಚೇತನ ಆಸ್ಪತ್ರೆ ಸಾರ್ವಜನಿಕರಿಗೆ 10ದಿನಗಳ ಉಚಿತ ಚಿಕಿತ್ಸಾ ಶಿಬಿರ ಏರ್ಪಡಿಸಿದೆ. ಮಹಿಳೆಯರು ಮತ್ತು ಪುರುಷರನ್ನ ಭಾದಿಸುವ ಬಾಯಿ ಕ್ಯಾನ್ಸರ್, ಬ್ರೆಸ್ಟ್ ಕ್ಯಾನ್ಸರ್, ಗರ್ಭಗಂಟದ ಕ್ಯಾನ್ಸರ್, ಕರುಳ ಕ್ಯಾನ್ಸರ್, ಅಂಡಾಶಯ ಕ್ಯಾನ್ಸರ್ ಗಳಿಗೆ ಉಚಿತ ಚಿಕಿತ್ಸೆ ನೀಡಲಾಗ್ತಿದೆ. ಹೀಗೆ ಎಲ್ಲಾ ರೀತಿಯ ಕ್ಯಾನ್ಸರ್ಗಳಿಗೆ ಸ್ಕ್ರೀನಿಂಗ್, ಟೆಸ್ಟಿಂಗ್ ಮತ್ತು ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುವುದೆಂದು ನವಚೇತನ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
PublicNext
22/08/2022 08:30 am