ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸರ್ವರಿಗೂ ಸಮಬಾಳು ನೀಡಿದ ಏಕೈಕ ನಾಯಕ ದೇವರಾಜ ಅರಸು; ಸಚಿವ ಡಾ.ಸುಧಾಕರ್

ದೇವನಹಳ್ಳಿ: ರಾಜ್ಯದ ಧೀಮಂತ ಮುಖ್ಯಮಂತ್ರಿ ದೇವರಾಜ ಅರಸು ಅವರ 107ನೇ ಜನ್ಮದಿನೋತ್ಸವದ ದಿನವೇ ದೇವನಹಳ್ಳಿಯಲ್ಲಿ 3.5 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಿರುವ ದೇವರಾಜ ಅರಸು ಭವನವನ್ನು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಉದ್ಘಾಟಿಸಿದರು.

ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬಂತೆ ಆಡಳಿತ ನಡೆಸಿದ ರಾಜ್ಯದ ಏಕೈಕ CM ದೇವರಾಜ ಅರಸುರವರು. ಅಂತಹ ಮಹನೀಯರಿಗೆ ಸಿಗಬೇಕಾದ ಗೌರವ ಸಿಗದಿರುವುದು ಬೇಸರ ತಂದಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ದೇವನಹಳ್ಳಿಯ ಕಾರ್ಯಕ್ರಮದಲ್ಲಿ ತಿಳಿಸಿದರು.

ದೇವರಾಜ ಅರಸು ಅವರ ಪಕ್ಷವೇ ಅವರಿಗೆ ಮುಳುವಾಯಿತು. ಅವರ ಪಕ್ಷದ ಪ್ರಧಾನಿ ಇಂದಿರಾ ಗಾಂಧಿಯವರು ಉತ್ತರದಲ್ಲಿ ಸೋತಾಗ ಚಿಕ್ಕಮಗಳೂರಿನಿಂದ ಮತ್ತೆ ರಾಜಕೀಯ ಮುಖ್ಯವಾಹಿನಿಗೆ ಬರಲು ಅರಸು ಶ್ರಮಿಸಿದರು. ಇಂತಹ ಅರಸು ಅವರನ್ನು ಪಕ್ಷ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ, ಅವರನ್ನು ಪಕ್ಷದಿಂದಲೂ ಉಚ್ಚಾಟಿಸಿತು! ಇದು ಒಬ್ಬ ಧೀಮಂತ ನಾಯಕ ಅನುಭವಿಸಿದ ಅತ್ಯಂತ ನೋವಿನ ಸಂಗತಿ ಎಂದು ಕಾಂಗ್ರೆಸ್ ಪಕ್ಷಕ್ಕೆ ಕಟುವಾಗಿ ಕುಟುಕಿದರು.

ದೇವನಹಳ್ಳಿಯ ತಾಲೂಕು ಪಂಚಾಯ್ತಿ ಆವರಣಕ್ಕೆ ಹೊಂದಿಕೊಂಡಂತೆ ಅರಸು ಅವರ ಹೆಸರಿನ ಕಟ್ಟಡ ಕಳೆದ ಐದು ವರ್ಷದ ಅವಧಿಯಲ್ಲಿ‌ ನಿರ್ಮಾಣ ಆಗಿದೆ. ಹಿಂದುಳಿದ- ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಗಾಗಿ ಜಿಲ್ಲಾ ಪಂಚಾಯ್ತಿಯ ನಿರ್ಮಿತಿ ಕೇಂದ್ರದಿಂದ ಈ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ತಿಳಿಸಿದರು.

ಅರಸು ಮನೆತನದಲ್ಲಿ ಹುಟ್ಟಿದರೂ ಅತ್ಯಂತ ಸರಳವಾಗಿ ಹಿಂದುಳಿದ ಜನರಿಗಾಗಿ ಬಾಳಿ ಬದುಕಿದ ಧೀಮಂತ ನಾಯಕನಿಗೆ ಮತ್ತೊಮ್ಮೆ ಹುಟ್ಟುಹಬ್ಬದ ಶುಭಾಶಯ.

Edited By : Manjunath H D
PublicNext

PublicNext

21/08/2022 10:03 am

Cinque Terre

34.96 K

Cinque Terre

3

ಸಂಬಂಧಿತ ಸುದ್ದಿ