ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ವಿಶ್ವ ಅಂಗ ದಾನಿಗಳ ದಿನಾಚರಣೆ; ಬಿಜಿಎಸ್ ಆಸ್ಪತ್ರೆಯಲ್ಲಿ ಬೃಹತ್ ಭಿತ್ತಿ ಅನಾವರಣ

ಬೆಂಗಳೂರು: ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಅಸ್ಪತ್ರೆ ವತಿಯಿಂದ ಇಂದು ನಡೆದ ವಿಶ್ವ ಅಂಗ ದಾನಿಗಳ ದಿನದ ಪ್ರಯುಕ್ತ ದಾನಿಗಳನ್ನು ಗುರುತಿಸುವ ಬೃಹತ್ ಭಿತ್ತಿ ಅನಾವರಣ ಮಾಡಲಾಯಿತು.

ವಿಶ್ವ ಅಂಗ ದಾನ ದಿನವನ್ನು ಸ್ಮರಣೀಯವಾಗಿಸಲು ಬೆಂಗಳೂರಿನ ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ದಾನಿಗಳ ಮತ್ತು ಅವರ ಕುಟುಂಬದವರ ಉದಾರ ಮನದ ನಿಸ್ವಾರ್ಥ ಸೇವೆಗೆ ಗೌರವ ಸಲ್ಲಿಸಲು ಭಾರತದ ಅತಿದೊಡ್ಡ ಗೌರವ ಗೋಡೆಯನ್ನು ನಿರ್ಮಿಸಿದೆ.

ಭಿತ್ತಿಯು 8 ಅಡಿ ಎತ್ತರ ಮತ್ತು ತನ್ನ ಮೊದಲ ಹಂತದಲ್ಲಿ 22.5 ಅಡಿ ಅಗಲವಿದೆ. ಇದು ಭಾರದ ಹಾಗೂ ವಿಶ್ವದಲ್ಲೇ ಅತಿ ದೊಡ್ಡದಾಗಿದೆ. ಒಟ್ಟು132 ದಾನಿಗಳನ್ನು ಗುರುತಿಸಲಾಗಿದ್ದು, ಅವರ ಹೆಸರುಗಳನ್ನು ಈ ಗೋಡೆಯ ಮೇಲೆ ಕೆತ್ತಲಾಗಿದೆ. ತನ್ನ ಮೊದಲ ಹಂತದಲ್ಲಿ500 ದಾನಿಗಳ ಹೆಸರುಗಳಿಗೆ ಅವಕಾಶವನ್ನು ಕಲ್ಪಿಸುವ ಸಾಮರ್ಥ್ಯವನ್ನು ಹೊಂದಿದೆ.

ಗೋಡೆಯ ಎರಡು ಬದಿಗಳಲ್ಲಿ ಎರಡನೇ ಹಂತದ ವಿಸ್ತರಣೆಗೆ ಅವಕಾಶವಿದ್ದು, ಭವಿಷ್ಯದಲ್ಲಿ ಒಟ್ಟು1500 ಹೆಸರುಗಳಿಗೆ ಅದರ ಸಾಮರ್ಥ್ಯವನ್ನು ವೃದ್ಧಿಸುವ ಗುರಿ ಇದೆ. ಬಿಜಿಎಸ್ ಗ್ರೂಪ್ ಆಫ್ ಇನ್‌ ಸ್ಟಿಟ್ಯೂಷನ್ಸ್ ಮತ್ತು ಹಾಸ್ಪಿಟಲ್ ನ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಪ್ರಕಾಶನಾಥ ಸ್ವಾಮೀಜಿ ಮತ್ತು ಅವಧೂತ ವಿನಯ್ ಗುರೂಜಿಯವರ ಉಪಸ್ಥಿತಿಯಲ್ಲಿ ಉದ್ಘಾಟನೆ ನಡೆಯಿತು.

ವರದಿ: ರಂಜಿತಾ ಸುನಿಲ್, ಪಬ್ಲಿಕ್‌ ನೆಕ್ಸ್ಟ್‌ ಬೆಂಗಳೂರು

Edited By : Nagesh Gaonkar
PublicNext

PublicNext

13/08/2022 09:56 pm

Cinque Terre

33.07 K

Cinque Terre

0

ಸಂಬಂಧಿತ ಸುದ್ದಿ