ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಕಲಿ ದೇಶಭಕ್ತರಿಗೆ ರಾಷ್ಟ್ರಧ್ವಜದ ಘನತೆಯ ಬಗ್ಗೆ ಗೊತ್ತಿಲ್ಲ: ಬಿಜೆಪಿ ಕಾಲೆಳೆದ ಕಾಂಗ್ರೆಸ್‌

ಬೆಂಗಳೂರು: ನಕಲಿ ದೇಶಭಕ್ತರಿಗೆ ರಾಷ್ಟ್ರಧ್ವಜದ ಘನತೆಯ ಬಗ್ಗೆ ಗೊತ್ತಿಲ್ಲ ಎಂದು ರಾಜ್ಯ ಕಾಂಗ್ರೆಸ್ ಬಿಜೆಪಿ ವಿರುದ್ಧ ಕಿಡಿಕಾರಿದೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಮತ್ತು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ರಾಷ್ಟ್ರಧ್ವಜದ ಬ್ಯಾಡ್ಜ್ ಉಲ್ಟಾ ಹಾಕಿಕೊಂಡ ಫೋಟೋವನ್ನು ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್‌, "ಬಿಜೆಪಿ ನಕಲಿ ದೇಶಭಕ್ತರಿಗೆ ದೇಶದ ಗೌರವವೂ ತಿಳಿದಿಲ್ಲ. ಎಷ್ಟಾದರೂ ಗೋಡ್ಸೆ ಭಕ್ತರಲ್ಲವೇ? ಸಂವಿಧಾನದ ವಿರೋಧಿಗಳಲ್ಲವೇ? ಮನದೊಳಗೆ ಸಂಘದ ಪಾಠವಾದ ತಿರಂಗಾ ದ್ವೇಷ ಇಟ್ಟುಕೊಂಡಿರುವ ಕಟೀಲ್ ಅವರಿಗೆ ಧ್ವಜ ತಲೆಕೆಳಗಾಗಿಸುವುದೇ ಮೂಲ ಅಜೆಂಡಾ ಎಂದು ಆಕ್ರೋಶ ವ್ಯಕ್ತಪಡಿಸಿದೆ.

Edited By : PublicNext Desk
PublicNext

PublicNext

12/08/2022 04:10 pm

Cinque Terre

7.9 K

Cinque Terre

2

ಸಂಬಂಧಿತ ಸುದ್ದಿ