ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕೆ.ಆರ್ ಪುರದಲ್ಲಿ ಹರ್ ಘರ್ ತಿರಂಗ ಜಾಥಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಚಾಲನೆ

ವರದಿ- ಬಲರಾಮ್ ವಿ

ಬೆಂಗಳೂರು: ಕೆ.ಆರ್ ಪುರದಲ್ಲಿ ಹರ್ ಘರ್ ತಿರಂಗ ಯಾತ್ರೆಯ ಅಂಗವಾಗಿ ಹಮ್ಮಿಕೊಂಡಿದ್ದ ವಿಜಿನಾಪುರದಿಂದ ಟಿ.ಸಿ ಪಾಳ್ಯವರೆಗಿನ ಪಾದಯಾತ್ರೆ ಜಾಥಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹಾಗೂ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಕಟೀಲ್ ಅವರು ಭಾರತ ರಾಷ್ಟ್ರವನ್ನು ಪ್ರೀತಿಸದೇ ಇರುವ ದೇಶ ಇಲ್ಲ. ಇದುವರೆಗೂ ಭಾರತ ದೇಶ ಯಾವುದೇ ದೇಶದ ಮೇಲೆ ದಾಳಿ ನಡೆಸಿಲ್ಲ ಎಂದು ಹೇಳಿದರು.

ದೇವಾನು ದೇವತೆಗಳು ಕುಣಿದಾಡುವ ದೇಶ ಭಾರತ ಗುಲಾಮಗಿರಿಯಿಂದ ಮುಕ್ತವಾಗಿದ್ದಕ್ಕೆ 75 ವರ್ಷ ಕಳೆಯುತ್ತಿದೆ ಇದರ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹರ್ ಘರ್ ತಿರಂಗ ಎಂದು ಘೋಷಣೆ ಮೂಲಕ ಪ್ರತಿಯೊಬ್ಬ ದೇಶಭಕ್ತನ ಮನೆ ಮೇಲೆ ರಾಷ್ಟ್ರಧ್ವಜ ಹಾರಿಸಲು‌ಕರೆ ನೀಡಿದ್ದಾರೆ ಎಂದು ತಿಳಿಸಿದರು.

ಮಂಗಲ್ ಪಾಂಡೆ, ಆಜಾದ್, ಸುಭಾಶ್ ಚಂದ್ರಬೋಸ್, ಮಹಾತ್ಮ ಗಾಂಧೀಜಿ, ಕಿತ್ತೂರು ರಾಣಿ ಚೆನ್ನಮ್ಮ, ಅಬ್ಬಕ್ಕ ಸೇರಿದಂತೆ ಹಲವಾರು ಹೋರಾಟಗಾರರ ಶ್ರಮದಿಂದ ಸ್ವಾತಂತ್ರ ಸಿಕ್ಕಿದೆ ಎಂದರು. ಮೋದಿ ನೇತೃತ್ವದ ಭಾರತವನ್ನು ಇಡೀ

ಜಗತ್ತೇ ಸಂತೋಷಪಟ್ಟಿದೆ. ಮುಂದಿನ 25 ವರ್ಷಗಳು ಅಮೃತಕಾಲ ಬರಲಿದೆ. ದೇಶ ಒಂದೇ ಎಂಬ ಕೂಗು ಇರಬೇಕು ಎಂದರು. ಕೆಆರ್ ಪುರ ಕ್ಷೇತ್ರದಲ್ಲಿ ಈಗಾಗಲೇ 51 ಸಾವಿರ ರಾಷ್ಟ್ರ ಧ್ವಜವನ್ನು ಮನೆ ಮನೆಗೂ ನೀಡುವ ಮೂಲಕ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

Edited By : Manjunath H D
PublicNext

PublicNext

11/08/2022 05:38 pm

Cinque Terre

23.68 K

Cinque Terre

1

ಸಂಬಂಧಿತ ಸುದ್ದಿ