ಬೆಂಗಳೂರು : ಚಾಮರಾಜಪೇಟೆ ಮೈದಾನದಲ್ಲಿ ಗಣೇಶ ಕೂರಿಸಬೇಡಿ, ಪರ್ಮೀಶನ್ ಕೊಡಲ್ಲ ಅಂತ ಹೇಳೋಕೆ ಆಟದ ಮೈದಾನ ಜಮೀರ್ ಅಪ್ಪನ ಆಸ್ತಿಯಾ.?ಗಣೇಶನನ್ನು ಇಡಲು ಅನುಮತಿ ಕೊಡಲ್ಲ ಅಂತ ಹೇಳೋಕೆ ಜಮೀರ್ ಯಾರು. ಅನುಮತಿ ಕೊಡೋದು ಬಿಬಿಎಂಪಿ ಎಂದು ಜಮೀರ್ ವಿರುದ್ಧ ಸಿಟಿ ರವಿ ಪ್ರಶ್ನೆ ಮಾಡಿದ್ದಾರೆ.
ಚಾಮರಾಜಪೇಟೆ ಕಂದಾಯ ಇಲಾಖೆಗೆ ಸೇರಿದ ಆಸ್ತಿ.ಅದು ಸರ್ಕಾರದ ಆಸ್ತಿ, ಅಲ್ಲಿ ಗಣೇಶೋತ್ಸವ ಅದ್ದೂರಿಯಾಗಿ ಮಾಡ್ತೀವಿ. ಹೊಳೆ ನೀರಿಗೆ ದೊಣ್ಣೆ ನಾಯಕನ ಅಪ್ಪಣೆ ಬೇಕಾ.? ಇವನು ಯಾವ ಸೀಮೆ ದೊಣ್ಣೆ ನಾಯಕ. ನಮ್ಮ ದೇಶದಲ್ಲಿ ಗಣಪತಿ ಇಡೋದಾ, ಬೇಡ್ವಾ ಅಂತ ಜಮೀರ್ ಅನುಮತಿ ಕೇಳಬೇಕಾ. ಜಮೀರ್ ಕೇಳಿ ಗಣೇಶೋತ್ಸವ ಮಾಡಬೇಕಾ, ನಮಗೆ ತಾಕತ್ ಇದೆ ಗಣೇಶನನ್ನು ಕೂರಿಸ್ತೇವೆ.ಅದ್ದೂರಿಯಾಗಿ ಆಚರಣೆ ಮಾಡ್ತೀವಿ, ಬಂದು ಯಾರು ತಡೀತಾರೆ ಬರಲಿ ನೋಡೋಣ.?ನಾವೇನು ಅರಬ್ ನಲ್ಲಿ ಹೋಗಿ ಕೂರಿಸ್ತಿದ್ದೀವಾ.? ಎಂದಿದ್ದಾರೆ.
ಅರಬ್ ನಲ್ಲಿ ಗಣೇಶನನ್ನು ಕೂರಿಸೋದಾದ್ರೆ ಜಮೀರ್ ಮತ್ತು ಅವರ ಪೂರ್ವಜರ ಅನುಮತಿ ಪಡೆಯೋಣ.FIR ಹಾಕಬೇಕಿರೋದು ಜಮೀರ್ ಮೇಲೆ.ರಾಷ್ಟ್ರ ಧ್ವಜ ಹಾರಿಸೋಕೆ ಪರ್ಮೀಷನ್ ಬಗ್ಗೆ ಮಾತಾಡ್ತಾರೆ.ನಾವು ರಾಷ್ಟ್ರ ಧ್ವಜ ಹೋರಾಟಕ್ಕೆ ಐದು ಕಾರ್ಯಕರ್ತರ ಕಳೆದುಕೊಂಡಿದ್ದೇವೆ.ರಾಷ್ಟ್ರ ಧ್ವಜದ ಬಗ್ಗೆ ಸಿದ್ದರಾಮಯ್ಯ ಪಾಠ ಮಾಡ್ತಾರೆ.ಅವರದ್ದೇ ಸರ್ಕಾರ ಇದ್ದಾಗ ರಾಷ್ಟ್ರ ಧ್ವಜ ಹಿಡಿದುಕೊಂಡು, ವಂದೇ ಮಾತರಂ ಗೀತೆ ಹಾಡುವಾಗ ಗೋಲಿಬಾರ್ ಮಾಡಿಸಿದ್ರು.
ಇದರಿಂದ ಎಂಟು ಜನ ಹತ್ಯೆ ಮಾಡಿದ್ರು.ಯಾವ ಏಳು ಸಮುದ್ರಕ್ಕೆ ಹೋದ್ರು ಕಾಂಗ್ರೆಸ್ ಪಾಪ ಹೋಗಲ್ಲ.ರಾಷ್ಟ್ರ ಧ್ವಜ ಹಾರಿಸಿದವರ ಮೇಲೆ ಗುಂಡು ಹಾರಿಸಿದ್ರು.ಹಾಗಾಗಿ ಅವರ ಪಾಪ ಹೋಗಲ್ಲ ಎಂದು ಸಿಟಿ ರವಿ ಜಮೀರ್ ವಿರುದ್ಧ ಕೆಂಡಕಾರಿದ್ದಾರೆ.
ಅಷ್ಟೇ ಅಲ್ಲದೆ ಚಾಮರಾಜಪೇಟೆ ಮೈಸೂರು ಚಾಮರಾಜೇಂದ್ರ ಒಡೆಯರ ಹೆಸರು ಹಾಗಾಗಿ ಮೈದಾನಕ್ಕೆ ಚಾಮರಾಜ ಒಡೆಯರ ಹೆಸರನ್ನ ಇಡಬೇಕಿತ್ತು ಎಂದು ಹೇಳಿದ್ದಾರೆ.
PublicNext
10/08/2022 03:17 pm