ಬೆಂಗಳೂರು : ರಾಜ್ಯದ ಕೃಷಿ ಸಚಿವರನ್ನ ಹುಡುಕಿಕೊಡುವಂತೆ ಕಾಂಗ್ರೆಸ್ ರಾಜ್ಯದ ಜನರಲ್ಲಿ ಮನವಿ ಮಾಡಿದೆ. ಗೊಬ್ಬರ ಕೊರತೆ, ಅತಿವೃಷ್ಟಿ ಹಾನಿ ಸೇರಿ ರೈತರಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳು ಉಂಟಾದಾಗಲೂ ಅವರು ಕಾಣಸಿಗುತ್ತಿಲ್ಲ.ನೆರೆ ಹಾನಿಯ ಬಗ್ಗೆ ಸರ್ವೆ ನಡೆಸಿ ಪರಿಹಾರ ಒದಗಿಸುವ ಕೆಲಸ ಮಾಡಬೇಕಾದವರು ನಾಪತ್ತೆಯಾಗಿದ್ದಾರೆ.ರಾಜ್ಯದಲ್ಲಿ ಅತಿವೃಷ್ಟಿಗೆ ಇದುವರೆಗೂ 73 ಮಂದಿ ಜೀವ ಕಳೆದುಕೊಂಡಿದ್ದಾರೆ ಎಂದು ಕಂದಾಯ ಸಚಿವರು ಹೇಳಿದ್ದಾರೆ.
ಇನ್ನು 73 ಜನರಲ್ಲಿ ಎಷ್ಟು ಕುಟುಂಬಕ್ಕೆ ಪರಿಹಾರ ನೀಡಲಾಗಿದೆ ಎಂಬುದನ್ನ ಏಕೆ ಹೇಳಲಿಲ್ಲ? ಆ ಕುಟುಂಬಗಳಿಗೆ ಇದುವರೆಗೂ ಪರಿಹಾರ ಏಕೆ ಘೋಷಿಸಲಿಲ್ಲ?ಸರ್ಕಾರದ ಪರಿಹಾರ ಪಡೆಯುವ ಮಾನದಂಡ ಎಲ್ಲಿದೆ.ಬಿಜೆಪಿ ಕಾರ್ಯಕರ್ತರಾಗಿ ಕೊಲೆಯಾಗುವುದು ಮಾತ್ರವೇ ?ಎಂದು ಟ್ವೀಟ್ ಮೂಲಕ ಕಾಂಗ್ರೆಸ್ ಆಕ್ರೋಶ ಹೊರಹಾಕಿದ್ದಾರೆ.ಅಷ್ಟೇ ಅಲ್ಲದೆ ಇಷ್ಟೇಲ್ಲ ಆದ್ರು ಕೃಷಿ ಸಚಿವರು ಕಾಣ್ತಿಲ್ಲ .ರಾಜ್ಯದ ಕೃಷಿ ಸಚಿವರಾದ ಬಿ.ಸಿ ಪಾಟೀಲ್ ರನ್ನು ತಕ್ಷಣವೇ ಹುಡುಕಿಕೊಡಬೇಕಾಗಿ ವಿನಂತಿ ಮಾಡಿಕೊಂಡಿದ್ದಾರೆ.
PublicNext
08/08/2022 07:46 pm