ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಅವೈಜ್ಞಾನಿಕವಾಗಿ ವಾರ್ಡ್ ವಿಂಗಡನೆ ಹಾಗೂ ಮೀಸಲಾತಿ ವಿರುದ್ಧ ಪ್ರತಿಭಟನೆ

ವರದಿ- ಬಲರಾಮ್ ವಿ

ಬೆಂಗಳೂರು: ಬಿಬಿಎಂಪಿ ಚುನಾವಣಾ ಹಿನ್ನೆಲೆ ಅವೈಜ್ಞಾನಿಕವಾಗಿ ವಾರ್ಡ್ ವಿಂಗಡನೆ ಹಾಗೂ ಮೀಸಲಾತಿ ನೀಡಿರುವುದನ್ನು ವಿರೋಧಿಸಿ ಮಹದೇವಪುರ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ವರ್ತೂರು ಕೋಡಿ ಬಳಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಮಹದೇವಪುರ ಕ್ಷೇತ್ರದ ಕಾಂಗ್ರೆಸ್ ಮುಖಂಡ ನಲ್ಲೂರಹಳ್ಳಿ ನಾಗೇಶ್ ಅವರು, ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ದಲಿತರಿಗೆ ಒಂದೇ ಒಂದು ವಾರ್ಡ್‌ ಮೀಸಲಿಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೀಸಲು ವಿಧಾನಸಭಾ ಕ್ಷೇತ್ರದಿಂದ ವಿಜೇತರಾದ ಶಾಸಕರು ದಲಿತರಿಗೆ ವಿರೋಧಿ ಧೋರಣೆಯನ್ನು ಅನುಸರಿಸುತ್ತಿದ್ದಾರೆಂದು ದೂರಿದರು.

ಮಹದೇವಪುರ ಕ್ಷೇತ್ರದಲ್ಲಿ 13 ವಾರ್ಡ್ ಗಳ ಪೈಕಿ ಒಂದು ವಾರ್ಡ್ ಗೆ ಮಾತ್ರ ಮೀಸಲಾತಿ ನೀಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು, ಅವೈಜ್ಞಾನಿಕ ವಾರ್ಡ್‌ ವಿಂಗಡಣೆಗೆ ಬೇಸರ ವ್ಯಕ್ತಪಡಿಸಿದರು.

ಮಾಜಿ ಪಾಲಿಕೆ ಸದಸ್ಯ ಉದಯ್ ಕುಮಾರ್ ಮಾತನಾಡಿ, ಸರ್ಕಾರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗುರಿಯಾಗಿಸಿಕೊಂಡು ಮೀಸಲಾತಿ ನಿಗದಿ ಪಡಿಸುವ ಮೂಲಕ ಕಾಂಗ್ರೆಸ್ ಮತಗಳನ್ನು ಒಡೆಯುವ ಕಾರ್ಯಮಾಡುತ್ತಿದೆ ಎಂದು ದೂರಿದರು.

ಚುನಾವಣೆ ಮುಂದೂಡುವ ದೃಷ್ಟಿಯಿಂದ ಅವೈಜ್ಞಾನಿಕ ಮೀಸಲಾತಿ ಪಟ್ಟಿ ಪ್ರಕಟಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು

ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷರಾದ ಬಾಬುಗೌಡ,ವಿಟಿಬಿ ಬಾಬು,ನಾಗಪ್ಪ,ಅನೀಲ್, ಮಾಜಿ ಅಧ್ಯಕ್ಷ ಜಯರಾಮರೆಡ್ಡಿ, ಮುಖಂಡರಾದ ರಾಮಕೃಷ್ಣಪ್ಪ,ವರ್ತೂರು ಸುರೇಶ್,ಮಧುರೆಡ್ಡಿ, ಲಕ್ಷ್ಮಿಪ್ರಸಾದ್,ದೀಪಕ್ ರಾಜ್ ಮತ್ತಿತರರು ಇದ್ದರು.

Edited By : Shivu K
Kshetra Samachara

Kshetra Samachara

08/08/2022 08:56 am

Cinque Terre

2.74 K

Cinque Terre

1

ಸಂಬಂಧಿತ ಸುದ್ದಿ