ವರದಿ: ಬಲರಾಮ್ ವಿ.
ಬೆಂಗಳೂರು: ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಸಾರ್ವಜನಿಕರು ಹಾಗೂ ಐಟಿಬಿಟಿ ಉದ್ಯೋಗಿಗಳು ಮಾನವ ಸರಪಳಿ ನಿರ್ಮಿಸಿ ಮಹದೇವಪುರ ಕ್ಷೇತ್ರದ ಕಾಡುಗುಡಿ ಸಮೀಪದ ಬೆಳೆತೂರು ಮುಖ್ಯ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.
ಬೆಳೆತೂರು ಭಾಗದಲ್ಲಿ ಹಲವಾರು ಸಮುಚ್ಚಯಗಳು ಇದ್ದು, ಸಾವಿರಾರು ನಿವಾಸಿಗಳು ವಾಸಿಸುತ್ತಿದ್ದಾರೆ. ರಸ್ತೆ, ಒಳಚರಂಡಿ ದುರಸ್ತಿ ಜೊತೆಗೆ ರಾಜಕಾಲುವೆಗಳ ಒತ್ತುವರಿ ತೆರವುಗೊಳಿಸುವಂತೆ ಪ್ರತಿಭಟನೆಕಾರರು ಆಗ್ರಹಿಸಿದರು.
ಮಳೆ ಬಂದರೆ ಅಪಾರ್ಟ್ ಮೆಂಟ್ ಹಾಗೂ ರಸ್ತೆಗಳು ಜಲಾವೃತಗೊಳ್ಳುತ್ತವೆ. ಆದಷ್ಟೂ ಬೇಗ ಅಧಿಕಾರಿಗಳು ಗಮನ ಹರಿಸಿ, ಸಮಸ್ಯೆ ಬಗೆಹರಿಸಬೇಕೆಂದು ಪ್ರತಿಭಟನೆಕಾರರು ಒತ್ತಾಯಿಸಿದರು.
PublicNext
07/08/2022 09:39 pm