ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಚಾಮರಾಜಪೇಟೆ ಈದ್ಗಾದಲ್ಲಿ ನಾಗರಿಕ ಒಕ್ಕೂಟದಿಂದ ಧ್ವಜಾರೋಹಣ ಪ್ಲಾನ್!

ಬೆಂಗಳೂರು:ಚಾಮರಾಜಪೇಟೆ ಈದ್ಗಾ ಮೈದಾನದ ವಿವಾದ ತಣ್ಣಗಾಗಿದೆ.ಆದರೆ ಚಾಮರಾಜಪೇಟೆಯ ನಾಗರೀಕರಲ್ಲಿ ಇನ್ನು ಪೂರ್ಣಮಟ್ಟದ ಸಮಾಧಾನ ಕಂಡು ಬಂದಿಲ್ಲ. ಆದಾಗ್ಯೂ ಇಂದು ತುಂಬಾ ದಿನಗಳ ನಂತರ ಚಾಮರಾಜಪೇಟೆಯಲ್ಲಿ ಹಬ್ಬದ ವಾತಾವರಣ ಕಂಡು ಬಂದಿದೆ.

ಹೌದು. ಇಲ್ಲಿಯ ನಾಗರೀಕರ ಒಕ್ಕೂಟ ಈದ್ಗಾ ಮೈದಾನದಲ್ಲಿ ರಾಷ್ಟ್ರ ಧ್ವಜ ಹಾರಿಸಲು ಪ್ಲಾನ್ ಮಾಡಿದೆ. ಈ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದೆ. ತಮ್ಮ ಮುಂದಿನ ನಡೆ ಬಗ್ಗೆನೂ ಹೇಳಿಕೊಂಡಿದೆ. ಒಂದು ಹಂತದವರೆಗೂ ಮಾತ್ರ ಜಯಸಾಧಿಸಿದೇವೆ.ಬಹಳಷ್ಟು ದಿನಗಳಿಂದ ಹೋರಾಟಮಾಡಿಕೊಂಡು ಬಂದಿದೇವೆ ಎಲ್ಲರಿಗೂ ಧನ್ಯವಾದ ಎಂದು ನಾಗರೀಕರು ತಿಳಿಸಿದ್ದಾರೆ.

ಹಲವು ಸಂಘ, ಸಂಸ್ಥೆಗಳು, ಸಂಘಟನೆಗಳ ಒಗ್ಗಟ್ಟಿನ ಹೋರಾಟದಿಂದ ಜಯ ಸಿಕ್ಕಿದೆ. ಹೀಗಾಗಿ ಈದ್ಗಾ ಮೈದಾನದಲ್ಲಿ ರಾಷ್ಟ್ರ ಭಾವುಟವನ್ನ ಹಾರಿಸುತ್ತೇವೆ.ಎಲ್ಲಾ ನಾಗರೀಕರು, ಹಿಂದೂ ಸಂಘಟನೆಗಳ ಸಹಕಾರದಿಂದ ಆ.15 ಕ್ಕೆ ಸ್ವಾತಂತ್ರ್ಯ ದಿನಾಚರಣೆ ಮಾಡುತ್ತೇವೆ ಎಂಬುದಾಗಿ ಚಾಮರಾಜಪೇಟೆ ನಾಗರೀಕರು ಹೇಳಿದ್ದಾರೆ.

ರಾಷ್ಟ್ರ ಬಾವುಟ ಹಾರಿಸೋದರ ಬಗ್ಗೆ ಮನವಿ ಕೊಟ್ಟಿದ್ದೇವೆ.ಸ್ವಾತಂತ್ರ್ಯ ದಿನಾಚರಣೆ ಮಾಡಲು ತಯಾರಾಗಿದ್ದೇವೆ.ಮೈದಾನದಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳು ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗಿಯಾಗ್ತಾರೆ.

ಈ ಮೈದಾನಕ್ಕಾಗಿ ಒಬ್ಬ ಮಹಾತಾಯಿಯ ಬಲಿದಾನವಾಗಿದೆ.ಸರ್ಕಾರ ಕೂಡಲೇ ಸ್ಪಂದಿಸಿದೆ.ಬಿಬಿಎಂಪಿಯಿಂದ ವಕ್ಫ್ ಬೋಡ್೯ ಗೆ ಎರಡು ಸಲ ನೋಟಿಸ್ ಕೊಟ್ರು, ಪ್ರತಿಕ್ರಿಯೆ ಕೊಟ್ಟಿರಲಿಲ್ಲ.ಆದ್ರೆ ಇದೀಗ ಸ್ಪಂದಿಸಿದೆ. ಕ್ಷೇತ್ರದ ಜನ ಕೂಡ ನಮ್ಮ ಹೋರಾಟಕ್ಕೆ ಬೆಂಬಲ ಕೊಟ್ಟಿದ್ದಾರೆ.

5 ಸಾವಿರಕ್ಕೂ ಹೆಚ್ಚು ಜನ ಬಂದ್ ಗೆ ಬೆಂಬಲಿಸಿದ್ರು. ಚಾಮರಾಜಪೇಟೆ ಆಟದ ಮೈದಾನದಲ್ಲಿ ತ್ರಿವರ್ಣ ಧ್ವಜ ಹಾರಿಸುತ್ತೇವೆ.ಇದನ್ನ ತಡೆಯಲು ಯಾರಿಂದಲೂ ಸಾಧ್ಯವಿಲ್ಲ.ಆದರೆ ಮೈದಾನವನ್ನ ಕಂದಾಯ ಇಲಾಖೆಗೆ ಹಸ್ತಾಂತರ ಮಾಡಿ, ವಕ್ಫ್ ಬೋಡ್೯ ಗೆ ಏನಾದ್ರೂ ಸ್ವತ್ತನ್ನು ಕೊಡ್ತಾರಾ ಅನ್ನೋ ಆತಂಕವಿದೆ. ಹಾಗಾಗಿ ಜಯಚಾಮರಾಜೇಂದ್ರ ಆಟದ ಮೈದಾನವೆಂದು ಕಂದಾಯ ಇಲಾಖೆ ಘೋಷಿಸಬೇಕು ಎಂದು ನಾಗರೀಕ ಒಕ್ಕೂಟದವರು ಮನವಿ‌ ಮಾಡಿಕೊಂಡಿದ್ದಾರೆ.

Edited By : Nagesh Gaonkar
PublicNext

PublicNext

07/08/2022 03:39 pm

Cinque Terre

28.59 K

Cinque Terre

0

ಸಂಬಂಧಿತ ಸುದ್ದಿ