ಬೆಂಗಳೂರು: ರಾಜ್ಯದಲ್ಲಿ ಮತ್ತೆ ಧರ್ಮ ದಂಗಲ್ ಶುರುವಾಗುವ ಮುನ್ಸೂಚನೆಗಳು ದೊರೆತಿವೆ. ಮುಂಬರುವ ಗಣೇಶ ಚತುರ್ಥಿ ಮೂಲಕ ಮತ್ತೊಮ್ಮೆ ಧರ್ಮ ದಂಗಲ್ ಸೃಷ್ಟಿಯಾಗುವ ಲಕ್ಷಣಗಳು ಕಾಣುತ್ತಿವೆ.
ಗಣೇಶ ಚತುರ್ಥಿಗೆ ಮುಸ್ಲಿಮರನ್ನ ನಿಷೇಧ ಮಾಡುವಂತೆ ಶ್ರೀರಾಮ ಸೇನೆ ಕರೆ ನೀಡಿದೆ. ಮುಸ್ಲಿಮರಿಂದ ಯಾವುದೇ ವಸ್ತುವನ್ನು ಖರೀದಿ ಮಾಡದಂತೆ ಕರೆ ನೀಡಿದೆ. ರಾಜ್ಯದ ಎಲ್ಲಾ ಗಣೇಶ್ ಉತ್ಸವ ಸಮಿತಿಗೆ ಶ್ರೀರಾಮ ಸೇನೆ ಮನವಿ ಮಾಡಿದೆ.
ಹಬ್ಬಕ್ಕೆ ಬೇಕಾಗಿರುವ ಎಲ್ಲಾ ವಸ್ತುಗ ಳನ್ನು ಹಿಂದೂಗಳಿಂದಲೇ ಪಡೆಯ ಬೇಕೆಂದು ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಇನ್ನೂ ಮಸೀದಿಗಳಲ್ಲಿ ಅಜಾನ್‌ನಿಂದ ಹೆಚ್ಚು ಶಬ್ದ ಬರ್ತಿದ್ದರೂ ಕ್ರಮ ರಾಜ್ಯ ಸರ್ಕಾರ ಕ್ರಮ ತೆಗೆದು ಕೊಂಡಿಲ್ಲ. ಸರ್ಕಾರದ ನಡೆಯ ವಿರುದ್ಧ ಹಿಂದೂಗಳಿಗೆ ವಿನೂತನ ರೀತಿಯ ಕರೆಯನ್ನು ಶ್ರೀರಾಮ ಸೇನೆ ನೀಡಿದೆ.
PublicNext
06/08/2022 04:39 pm