ವರದಿ: ಗೀತಾಂಜಲಿ
ಬೆಂಗಳೂರು: ಸಿದ್ದರಾಮಯ್ಯ ಹುಟ್ಟುಹಬ್ಬವನ್ನು ಸಂಭ್ರಮದಿಂದ ಮಾಡ್ತಿದ್ದಾರೆ. ಹುಟ್ಟುಹಬ್ಬ ಮಾಡಲಿ, ನಾನೂ ಶುಭ ಕೋರುತ್ತೇನೆ. ಆದರೆ, ರಾಜ್ಯದಲ್ಲಿ ಈಗ ಸೂತಕದ ವಾತಾವರಣ ಇದೆ. ಈ ಸಂದರ್ಭ ಸಂಭ್ರಮ ಬೇಕಿತ್ತಾ!? ಎಂದು ಎಂಎಲ್ ಸಿ ರವಿಕುಮಾರ್ ಪ್ರಶ್ನಿಸಿದ್ದಾರೆ.
ಮಂಗಳೂರು ಘಟನೆ ಬಳಿಕ ರಾತ್ರಿ ಸುದ್ದಿಗೋಷ್ಟಿ ಕರೆದು ಜನೋತ್ಸವ ಕಾರ್ಯಕ್ರಮ ರದ್ದು ಮಾಡಿದೆವು. ಇಂದು 13 ಜನ ಸಾವನ್ನಪ್ಪಿದ್ದಾರೆ. ಸಾವಿರಾರು ಮಂದಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಸಂದರ್ಭದಲ್ಲಿಯೂ ರಾಹುಲ್ ಗಾಂಧಿ ಬಂದು ಸಂಭ್ರಮ ಆಚರಿಸಬೇಕಿತ್ತಾ? ಅದನ್ನು ಸ್ವಲ್ಪ ಯೋಚಿಸಲಿ ಅಂತ ರವಿಕುಮಾರ್ ಅಸಮಾಧಾನ ಹೊರಹಾಕಿದ್ದಾರೆ.
ಇನ್ನು, ಕಳೆದ ಒಂದು ವಾರದಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಹ ಸ್ಥಿತಿ ಇದೆ. ನೂರಾರು, ಸಾವಿರಾರು ಮನೆಗಳು ಬಿದ್ದಿದೆ. ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾದವರಿಗೆ ಸಹಾಯ ಮಾಡಲಾಗ್ತಿದೆ. ಭಟ್ಕಳ ಪ್ರದೇಶಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಹೋಗ್ತಿದ್ದಾರೆ.
PublicNext
03/08/2022 03:28 pm