ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೊಡ್ಡಬಳ್ಳಾಪುರ: ಆರ್ ಎಸ್ ಎಸ್ ಮುಖಂಡರ ಮಾತು ಕೇಳೋದು ಬಿಡಿ: ಬಿ.ಸಿ.ಆನಂದ್ ಕುಮಾರ್

ದೊಡ್ಡಬಳ್ಳಾಪುರ: ಸಿಎಂ ಬಸವರಾಜ ಬೊಮ್ಮಾಯಿ ರಾಜ್ಯದಲ್ಲಿ ಕೋಮು ಗಲಭೆಗಳಿಗೆ ಕಡಿವಾಣ ಹಾಕಲು, ಅಮಾಯಕ, ಬಡ, ಮುಗ್ಧರ ಜೀವವನ್ನು ಉಳಿಸಲು ಮಾಜಿ ಸಿಎಂ ದಿ.ರಾಮಕೃಷ್ಣ ಹೆಗಡೆ ಅವರಂತೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ಮತ್ತು ಆರ್ ಎಸ್ ಎಸ್ ಮುಖಂಡರ ಮಾತು ಕೇಳೋದು ಬಿಡಬೇಕೆಂದು ಬಮೂಲ್ ನಿರ್ದೇಶಕ ಬಿ.ಸಿ.ಆನಂದ್ ಕುಮಾರ್ ಒತ್ತಾಯಿಸಿದರು.

ದೊಡ್ಡಬಳ್ಳಾಪುರ ನಗರದ ಬಮೂಲ್ ಶೀಥಲ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಇತ್ತೀಚಿನ ಬೆಳವಣಿಗೆ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಮಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯಾಗಿರುವುದು ಖಂಡನೀಯ. ಹಿಂದೂ ಪರ ಸಂಘಟನೆಗಳ ಯುವಕರು ಮೊದಲು ತಮ್ಮ ಮನೆಗಳಲ್ಲಿ ತಂದೆ-ತಾಯಿ, ಹೆಂಡತಿ, ಮಕ್ಕಳು, ಹಾಗೂ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಬೇಕು. ನಿಮಗೆ ಏನಾದರೂ ಅನಾಹುತಗಳಾದರೆ ನಿಮ್ಮ ಕುಟುಂಬ ಬೀದಿಗೆ ಬರುವಂತಾಗುತ್ತದೆ ಎಂದು ಎಚ್ಚರಿಸಿದರು. ರಾಜಕೀಯ ನಾಯಕರುಗಳು ಯುವಕರನ್ನು ಕೇವಲ ತಮ್ಮ ರಾಜಕೀಯ ಕಾರಣಗಳಿಗೆ ಬಳಸಿಕೊಳ್ಳುತ್ತಾರೆ ಎಂದರು.

ಧರ್ಮದ ಹೆಸರಿನಲ್ಲಿ ಹೋರಾಟಗಳಿಗೆ ಸಂಸದರು, ಶಾಸಕರುಗಳು ತಮ್ಮ ಮಕ್ಕಳನ್ನು ತರಲಿ. ಕೇವಲ ಬಡ, ಮುಗ್ಧ, ಅಮಾಯಕರನ್ನು ಕರೆತಂದು ಬೀದಿ ಹೆಣ ಮಾಡುತ್ತಿದ್ದಾರೆ. ಇಂತಹ ದುರ್ಘಟನೆಗಳಾದ ಕುಟುಂಬಗಳು ಬೀದಿಗೆ ಬಂದಿವೆ. ಯಾರೂ ಕೂಡ ಸ್ಪಂದಿಸುವುದಿಲ್ಲ ಎಂದರು.

Edited By : Manjunath H D
PublicNext

PublicNext

28/07/2022 07:41 pm

Cinque Terre

33.2 K

Cinque Terre

0

ಸಂಬಂಧಿತ ಸುದ್ದಿ