ದೊಡ್ಡಬಳ್ಳಾಪುರ : ಬಿಜೆಪಿ ಪಕ್ಷದ ಜನೋತ್ಸವ ಕಾರ್ಯಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ ಶಾಸಕ ಟಿ. ವೆಂಕಟರಮಣಯ್ಯ ಜನರನ್ನ ಸಭೆ ಸೇರಿಸಿ ಸುಳ್ಳು ಹೇಳುವ ಕಾರ್ಯಕ್ರಮವೇ ಜನೋತ್ಸವ ಕಾರ್ಯಕ್ರಮವೆಂದು ಚಾಡಿಸಿದರು.
ಜುಲೈ 28 ರಂದು ದೊಡ್ಡಬಳ್ಳಾಪುರದ ರಘುನಾಥಪುರದಲ್ಲಿ ಬಿಜೆಪಿ ಪಕ್ಷದ ಜನೋತ್ಸವ ಕಾರ್ಯಕ್ರಮ ನಡೆಯಲಿದೆ, ಜನೋತ್ಸವ ಕಾರ್ಯಕ್ರಮದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ದೊಡ್ಡಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ ವೆಂಕಟರಮಣಯ್ಯ ಜನರನ್ನ ಸೇರಿಸಿ ಸುಳ್ಳನ್ನು ಹೇಳುವ ಕಾರ್ಯಕ್ರಮವೇ ಜನೋತ್ಸವ ಕಾರ್ಯಕ್ರಮವೆಂದು ಚಾಡಿಸಿದರು.
ಈಗಾಗಲೇ ಜನ ಸುಳ್ಳು ಕೇಳಿ ಕೇಳಿ ಬೇಸತ್ತಿದ್ದಾರೆ. ಕಳೆದ 3 ವರ್ಷಗಳಲ್ಲಿ ದೊಡ್ಡಬಳ್ಳಾಪುರಕ್ಕೆ ಬಿಜೆಪಿ ಸರ್ಕಾರ ಕೊಟ್ಟ ಕೊಡುಗೆ ಏನು. ಕಾಂಗ್ರೆಸ್ ಅವಧಿಯ 2013 ರಿಂದ18 ವರೆಗೆ ದೊಡ್ಡಬಳ್ಳಾಪುರ ಕ್ಷೇತ್ರಕ್ಕೆ 24 ಕಾರ್ಯಕ್ರಮಗಳನ್ನ ಕೊಟ್ಟಿದ್ದೇವೆ.
ಎರಡು ವರ್ಷ ಕೊರೊನಾದಲ್ಲಿ ಕಳೆದ ಬಿಜೆಪಿ ಸರ್ಕಾರ ಕಳೆದೊಂದು ವರ್ಷದಲ್ಲಿ ಸಾಧನೆ ಮಾಡಿರುವುದ್ದಾಗಿ ಸುಳ್ಳು ಹೇಳುತ್ತಿದೆ. ಕನಿಷ್ಠ ಪಕ್ಷ ಹಿಂದಿನ ಸರ್ಕಾರದ ಯೋಜನೆಗಳನ್ನ ಪೂರ್ಣಗೊಳಿಸಿದ್ದಾರೆ ಸಾರ್ಥಕವಾಗುತ್ತಿತ್ತು. ಕ್ಷೇತ್ರದಲ್ಲಿ ಅಭಿವೃದ್ಧಿ ಮತ್ತು ಶಾಂತಿ ಕಾಪಾಡಿಕೊಂಡು ಬಂದಿದ್ದೇವೆ.
ಜನರ ಮನದಲ್ಲಿ ಕಾಂಗ್ರೆಸ್ ಪಕ್ಷ ಇದೆ, 33 ಸಾವಿರ ಇದ್ದ ರೇಷನ್ ಕಾರ್ಡ್ ಗಳನ್ನ 72 ಸಾವಿರ ರೇಷನ್ ಕಾರ್ಡ್ ಗಳಿಗೆ ಏರಿಕೆ ಮಾಡಿದ್ದು ಕಾಂಗ್ರೆಸ್ ಸರ್ಕಾರ ಎಂದರು.
PublicNext
27/07/2022 08:47 pm