ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕ್ಷೇತ್ರ ಸಮಸ್ಯೆ ಬಗೆಹರಿಸದಿದ್ದಲ್ಲಿ ರಾಜೀನಾಮೆ!; ಸಚಿವ ಎಸ್‌ .ಟಿ. ಸೋಮಶೇಖರ್

ಬೆಂಗಳೂರು: ಇಂದು ಯಶವಂತಪುರ ವಿಧಾನಸಭಾ ಕ್ಷೇತ್ರದ ಹೆಮ್ಮಿಗೆಪುರ ವಾರ್ಡ್ ನಲ್ಲಿ ಸಾರ್ವಜನಿಕರ ಸಭೆ ನಡೆಯಿತು. ಈ ಸಂದರ್ಭ ವಾರ್ಡ್ ವ್ಯಾಪ್ತಿಯ ಸಾರ್ವಜನಿಕರು ಏರಿಯಾಗಳ ಕುಂದುಕೊರತೆ ಬಗ್ಗೆ ಸಚಿವ ಎಸ್.ಟಿ. ಸೋಮಶೇಖರ್ ಹತ್ತಿರ ಹೇಳಿಕೊಂಡು, ಏನು ಮಾಡಬೇಕು? ಎಂದು ಚರ್ಚಿಸಿದರು.

ಈ ಸಂದರ್ಭ ಬನಶಂಕರಿ 6ನೇ ಹಂತದ 4ನೇ ಕ್ರಾಸ್ ನಲ್ಲಿರುವ ಕಸದ ಸಮಸ್ಯೆ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕಲಾಯಿತು. ಸಮಸ್ಯೆಗಳ ಬಗ್ಗೆ ಸಮಗ್ರವಾಗಿ ಚರ್ಚಿಸುವಾಗ ಸಾರ್ವಜನಿಕರ ಸಂಕಷ್ಟ ಕೇಳಿ ಸಚಿವರು, "ನಿಮ್ಮ ಸಮಸ್ಯೆಯನ್ನು ನಾನು ಬಗೆಹರಿಸದಿದ್ದಲ್ಲಿ ರಾಜೀನಾಮೆ ಕೊಡುವೆ.

ನಾನು ಯಾವತ್ತೂ ಕ್ಷೇತ್ರದ ಜನರ ಮಾತು ಮೀರಿಲ್ಲ. ನಾನು ಶಾಸಕನಾಗಿದ್ದಾಗ್ಲೇ ಹೆಚ್ಚು ಸ್ವಾತಂತ್ರ್ಯ ಇತ್ತು. ಈಗ ನಾನು ಸರ್ಕಾರದ ಒಂದು ಅಂಗ. ಈ ಚೌಕಟ್ಟಿನಲ್ಲಿ ಏನೆಲ್ಲ ಮಾಡಬೇಕು ಮಾಡ್ತಿದೀನಿ. ದಯವಿಟ್ಟು ಎಲ್ಲರೂ ಸಹಕರಿಸಿ" ಎಂದರು. ಹೆಮ್ಮಿಗೆಪುರ ವಾರ್ಡ್ ಮಾಜಿ ಕಾರ್ಪೊರೇಟರ್ ಆರ್ಯ ಶ್ರೀನಿವಾಸ್, ಕ್ಷೇತ್ರ ಅಧ್ಯಕ್ಷರು, BWSSB, BDA, BESCOM, Garbage ಅಧಿಕಾರಿಗಳು ಉಪಸ್ಥಿತರಿದ್ದರು.

ವರದಿ: ರಂಜಿತಾ ಸುನಿಲ್, ಪಬ್ಲಿಕ್‌ ನೆಕ್ಟ್ಸ್‌ ಬೆಂಗಳೂರು

Edited By :
Kshetra Samachara

Kshetra Samachara

26/07/2022 10:43 pm

Cinque Terre

3.09 K

Cinque Terre

0

ಸಂಬಂಧಿತ ಸುದ್ದಿ