ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: "ಕೇವಲ ಎರಡೇ ವರ್ಗದವರು ಸಿಎಂ ಆಗಬೇಕಾ, ಬೇರೆಯವರಿಗೆ ಅರ್ಹತೆ ಇಲ್ಲವೇ ?"

ಆನೇಕಲ್: ರಾಜ್ಯದ ಮುಖ್ಯಮಂತ್ರಿ ವಿಚಾರ ಸಂಬಂಧಪಟ್ಟಂತೆ ಕೇವಲ ಎರಡೇ ವರ್ಗದವರು ಮುಖ್ಯಮಂತ್ರಿ ಆಗಬೇಕಾ, ಬೇರೆಯವರಿಗೆ ಅರ್ಹತೆ ಇಲ್ಲವೇ ? ಬಿಜೆಪಿ ಸಿಎಂ ಅಭ್ಯರ್ಥಿ ವಿಚಾರದಲ್ಲಿ ಜಾತಿ ರಾಜಕಾರಣ ಮಾಡುತ್ತಿದೆ ಎಂದು ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ತಮ್ಮ ಪಕ್ಷದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆನೇಕಲ್ ಪಟ್ಟಣದ ಶ್ರೀರಾಮ ಕುಟೀರ ಹಮ್ಮಿಕೊಂಡಿದ್ದ ಬೀದಿ ವ್ಯಾಪಾರಿಗಳ ಸಹಕಾರ ಸಂಘದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಸಿಎಂ ಆಗುವ ಅರ್ಹತೆ ಎರಡೇ ವರ್ಗಕ್ಕೆ ಇದೆ ಎನ್ನುವ ವಾದ ನಡೀತಿದೆ. ಮಾಧ್ಯಮದವರು ಯಾಕೆ ಪ್ರಶ್ನೆ ಮಾಡುತ್ತಿಲ್ಲ !?

ತನ್ನ ವರ್ಗ ಮಾತ್ರ ಮುಖ್ಯಮಂತ್ರಿ ಗಾದಿಗೆ ಅರ್ಹ ಎಂಬುದು ಯಾವ ಸಂಸ್ಕಾರ! ಕೇವಲ ನನ್ನ ಜಾತಿಗೆ ಮತ ನೀಡಿ ಎನ್ನುವುದು ಸಂಸ್ಕಾರ ಅಲ್ಲ ಎಂದು ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ಬಿಜೆಪಿ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಪ್ರತಿಭಟನೆ ಬಗ್ಗೆ ಮಾತನಾಡಿದ ನಾರಾಯಣ ಸ್ವಾಮಿ, 50 ಲಕ್ಷ ಕೊಟ್ಟು, 2 ಸಾವಿರ ಕೋಟಿ ಹಣ ವರ್ಗಾವಣೆ ವಿಚಾರವಾಗಿ ಯಾರೂ ಸಹ ಮಾತನಾಡುತ್ತಿಲ್ಲ ಎಂದು ವ್ಯಂಗ್ಯವಾಡಿದರು.

Edited By : Manjunath H D
PublicNext

PublicNext

21/07/2022 08:56 pm

Cinque Terre

36.55 K

Cinque Terre

2

ಸಂಬಂಧಿತ ಸುದ್ದಿ