ರಿಪೋರ್ಟ್- ರಂಜಿತಾ ಸುನಿಲ್
ಬೆಂಗಳೂರು: ದಿನನಿತ್ಯ ಬಳಸುವ ವಸ್ತುಗಳ ಮೇಲೆ ಕೇಂದ್ರ ಸರ್ಕಾರ ಈಗಾಗ್ಲೆ ಜಿಎಸ್‌ಟಿ ವಿಧಿಸುತ್ತಿದೆ. ಈ ಬಗ್ಗೆ ಎಲ್ಲೆಲ್ಲೂ ಸಹ ತೀವ್ರ ಆಕ್ಷೇಪಗಳು ವ್ಯಕ್ತವಾಗುತ್ತಿದೆ. ಈ ಬಗ್ಗೆ ಸಾಮಾಜಿಕ ಹೋರಾಟಗಾರ ವಾಟಾಳ್ ನಾಗರಾಜು ಕೂಡ ಆಕ್ಷೇಪ ವ್ಯಕ್ತಪಡಿಸಿದ್ದು, ಪ್ರತಿಭಟನೆ ಮಾಡಿ ಸರ್ಕಾರಕ್ಕೆ ಛೀಮಾರಿ ಹಾಕಿದ್ದಾರೆ.
ಮಾಧ್ಯಮದ ಜೊತೆ ಮಾತನಾಡಿದ ಅವರು ಆಸ್ಪತ್ರೆಯ ರೂಮ್ ಬಾಡಿಗೆ ದಿನಕ್ಕೆ 5,000 ರೂ.ಗಿಂತ ಹೆಚ್ಚು ಇರುವ ಕೊಠಡಿಗಳ ಬಾಡಿಗೆಗೆ ಜಿಎಸ್‌ಟಿ ವಿಧಿಸಿದ್ದಾರೆ. ಇದಕ್ಕೆ ನಮ್ಮ ವಿರೋಧವಿದೆ. ಇದ್ರಿಂದ ಆರೋಗ್ಯ ಕ್ಷೇತ್ರವು ಹೆಚ್ಚಾಗಿ ಜಿಎಸ್‌ಟಿಯಿಂದ ವಿನಾಯಿತಿ ಪಡೆದಿದ್ದರೂ ಕೊಠಡಿ ಬಾಡಿಗೆಗೆ ತೆರಿಗೆ ವಿಧಿಸುವುದರಿಂದ ಇನ್ನು ಮುಂದೆ ಚಿಕಿತ್ಸಾ ವೆಚ್ಚವೂ ಹೆಚ್ಚಾಗುತ್ತದೆ. ಜನಸಾಮಾನ್ಯರು ಹೇಗೆ ಇದನ್ನೆಲ್ಲ ನಿಭಾಯಿಸುತ್ತಾರೆ. ಹುಷಾರಿಲ್ಲ ಅಂತ ಆಸ್ಪತ್ರೆಗೆ ಹೋದ್ರು ಅಲ್ಲು ಜಿಎಸ್‌ಟಿ ಎಂದು ಸರ್ಕಾರದ ಮೇಲೆ ಗುಡುಗಿದ್ದಾರೆ.
ಇನ್ನೂ ಟೆಟ್ರಾ ಪ್ಯಾಕ್ ಮೊಸರು, ಲಸ್ಸಿ ಮತ್ತು ಬೆಣ್ಣೆ ಹಾಲಿನ ಬೆಲೆಗಳು ಹೆಚ್ಚಾಗಲಿದೆ. ಇವುಗಳ ಮೇಲೆ ಶೇ. 5ರಷ್ಟು ಜಿಎಸ್‌ಟಿ ವಿಧಿಸಲಾಗಿದೆ. ಚೆಕ್‌ಬುಕ್ ವಿತರಿಸಲು ಬ್ಯಾಂಕ್‌ಗಳು ಈ ಹಿಂದೆ ವಿಧಿಸುತ್ತಿದ್ದ ಸೇವಾ ತೆರಿಗೆ ಇದೀಗ ಶೇ.18 ರಷ್ಟು ಜಿಎಸ್‌ಟಿ ಆಕರ್ಷಿಸಲಿದೆ. ಇದಲ್ಲವೂ ಸಹ ಖಂಡನೀಯ. ಜನ ಮಲಗಿಕೊಂಡ್ರು ಜಿಎಸ್‌ಟಿ ಎದ್ದರೂ ಕುಂತರೂ ನಿಂತರೂ ಜಿಎಸ್‌ಟಿ ಹಾಕ್ತಾರೆ ಈ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
PublicNext
20/07/2022 09:20 pm