ಬೆಂಗಳೂರು : ಡಿಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಮ್ಮ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಗಳು.ಇನ್ನೂ ಯಾರದ್ರು ಬರಬಹುದು ಎಂದು ಮಾಜಿ ಕೇಂದ್ರ ಸಚಿವ ವೀರಪ್ಪಮೊಯ್ಲಿ ತಿಳಿಸಿದರು.
ದೇವನಹಳ್ಳಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಇದು ಕಾಂಗ್ರೆಸ್ ಏಕ ಉದ್ದೇಶ. ಐಕ್ಯತೆಯಿಂದ ಕಾರ್ಯಕರ್ತರು ಮುಖಂಡರು ಕೆಲಸ ಮಾಡ್ತಾರೆ ಎಂದರು.
ನಮ್ಮಪಕ್ಷ ಈ ಸಲ ಮೇಜಾರಿಟಿಯೊಂದಿಗೆ ಅಧಿಕಾರಕ್ಕೆ ಬರುತ್ತದೆ.ಎಲ್ಲಾ ನಾಯಕರ ಅಭಿಪ್ರಾಯ ಪಡೆದು ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ಮಾಡಲಾಗುತ್ತದೆ.
ಬಿಜೆಪಿಯಲ್ಲಿ ಬಹಳಷ್ಟು ಮಂದಿ ಇದ್ದಾರೆ, ನಮ್ಮಲ್ಲಿ ಖರ್ಗೆ, ಪರಮೇಶ್ವರ್ ಸಹ ಇದ್ದಾರೆ, ನಾನು CM ಅಭ್ಯರ್ಥಿ ಅಲ್ಲ. ನಮ್ಮಲ್ಲಿ ಒಳಜಗಳ ಇಲ್ಲ. ಎಂದು ಮಾಜಿ ಸಂಸದ ವೀರಪ್ಪ ಮೊಯ್ಲಿ ಏಳಿದರು.
ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ದೇವನಹಳ್ಳಿ..
PublicNext
20/07/2022 09:33 am