ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಹೆಮ್ಮಿಗೆಪುರ ವಾರ್ಡ್‌ ಹೆಸರು ಮುಂದುವರಿಕೆ; ಸಂಭ್ರಮಾಚರಣೆಯಲ್ಲಿ ಎಚ್ ಡಿಕೆ ಭಾಗಿ

ಬೆಂಗಳೂರು: ಯಶವಂತಪುರ ವಿಧಾನಸಭಾ ಕ್ಷೇತ್ರದ ಹೆಮ್ಮಿಗೆಪುರ ವಾರ್ಡ್ ನಲ್ಲಿ ಇಂದು ಪೂಜೆ ಸಡಗರ... ಹೆಮ್ಮಿಗೆಪುರ ಹೆಸರಿನಲ್ಲೇ ವಾರ್ಡ್ ಮುಂದುವರೆಯುತ್ತಿರುವ ಸಂತಸದಲ್ಲಿ ವಾರ್ಡ್ ಜನರು ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಪಂಚಲಿಂಗಯ್ಯನವರ ನೇತೃತ್ವದಲ್ಲಿ ಊರಿನ ಶ್ರೀ ಮಾರಮ್ಮ ದೇವಿಗೆ ಪೂಜೆ ಸಲ್ಲಿಸಲಾಯಿತು.

ನಂತರ ಕ್ಷೇತ್ರದ ವರ್ಷದ ಎಲ್ಲಾ ಜೆಡಿಎಸ್ ಕಾರ್ಯಕ್ರಮಗಳಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಜವರಾಯಿ ಗೌಡ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, ಬೆಂಗಳೂರಿಗೆ ವಾರ್ಡ್ ಆಗಿ ಇತ್ತೀಚೆಗಷ್ಟೆ ಸೇರ್ಪಡೆಯಾದ ಈ ಹೆಮ್ಮಿಗೆಪುರ ವಾರ್ಡ್ ಬಹಳ ಚೆನ್ನಾಗಿ ಮುಂದುವರೆಯಬೇಕು. ಇದೇ ಊರಿನ ಹೆಸ್ರಲ್ಲಿ ವಾರ್ಡ್ ಮುಂದುವರೆಯುತ್ತಿರೋದು ಬಹಳ ಸಂತಸದ ವಿಷಯ. ಇನ್ನೂ ಈ ಊರು ಉನ್ನತ ಮಟ್ಟಕ್ಕೆ ಬೆಳೆಯುವಂತಾಗ್ಲಿ. ಮುಂದೆ ಉತ್ತಮ ಕಾರ್ಯಕ್ರಮಗಳು ನಡೆಯಲಿ, ನಾನೂ ಬರುತ್ತೇನೆ ಎಂದರು.

-ರಂಜಿತಾ ಸುನಿಲ್ ಪಬ್ಲಿಕ್‌ ನೆಕ್ಸ್ಟ್‌ ಬೆಂಗಳೂರು

Edited By : Nagesh Gaonkar
PublicNext

PublicNext

18/07/2022 11:03 pm

Cinque Terre

35.56 K

Cinque Terre

0

ಸಂಬಂಧಿತ ಸುದ್ದಿ