ದೊಡ್ಡಬಳ್ಳಾಪುರ : ಸಿದ್ದರಾಮಯ್ಯನವರ 75ನೇ ಹುಟ್ಟು ಹಬ್ಬದ ಆಚರಣೆಯ ಕಾರ್ಯಕ್ರಮವೇ ಹೊರತು ಸಿದ್ದರಾಮೋತ್ಸವ ಕಾರ್ಯಕ್ರಮವಲ್ಲ, ಈ ಕಾರ್ಯಕ್ರಮದಿಂದ ಕಾಂಗ್ರೆಸ್ ಪಕ್ಷಕ್ಕೆ ಲಾಭವಾಗಲಿದೆ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ರಾಮಲಿಂಗರೆಡ್ಡಿ ತಿಳಿಸಿದರು.
ದೊಡ್ಡಬಳ್ಳಾಪುರದ ಬೆಸೆಂಟ್ ಪಾರ್ಕ್ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸೇವಾದಳದಿಂದ ಸಮರ್ಥ್ ಶಿಬಿರ ನಡೆಯಲಿದ್ದು, ಇದರ ಸಿದ್ದತೆ ಪರಿಶೀಲನೆಯ ನಡೆಸಲು ಬಂದಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗರೆಡ್ಡಿ ಇದೇ ವೇಳೆ ಮಾಧ್ಯಮದೊಂದಿಗೆ ಮಾತನಾಡಿದರು.
ಸಿದ್ದರಾಮಯ್ಯನವರ 75ನೇ ಹುಟ್ಟು ಹಬ್ಬದ ಆಚರಣೆಯಲ್ಲಿ ಪಕ್ಷದ ಎಲ್ಲಾ ಮುಖಂಡರು ಭಾಗಿಯಾಗಲಿದ್ದಾರೆ, ರಾಹುಲ್ ಗಾಂಧಿ ಸಹ ಭಾಗವಹಿಸಲಿದ್ದಾರೆ, ಡಿ.ಕೆ.ಶಿವಕುಮಾರ್ ಸಹ ಬರಲಿದ್ದಾರೆ, ಸಿದ್ದರಾಮಯ್ಯನವರ ನಮ್ಮ ಪಕ್ಷದಿಂದ ಮುಖ್ಯಮಂತ್ರಿಯಾಗಿದ್ದವರು, ಜನಪರ ಕಾಳಜಿಯುಳ್ಳವರು, ಕಾರ್ಯಕ್ರಮ ಸಿದ್ದರಾಮಯ್ಯನವರಿಗೆ ಸೀಮಿತವಾಗದೆ ರಾಜ್ಯ ಮತ್ತು ದೇಶದಲ್ಲಿ ಬೆಳವಣಿಗೆ ಬಗ್ಗೆ ಚರ್ಚೆ ನಡೆಸಲಾಗುವುದು, ಈ ಕಾರ್ಯಕ್ರಮದಿಂದ ಪಕ್ಷಕ್ಕೂ ಲಾಭವಾಗಲಿದೆ ಎಂದರು.
ಕೆಪಿಸಿಸಿ ವತಿಯಿಂದ ಆಂತರಿಕ ಸಮೀಕ್ಷೆ ನಡೆಸಲಾಗಿದ್ದು ಹಾಲಿ 14 ಕಾಂಗ್ರೆಸ್ ಶಾಸಕರು ಹಿನ್ನಡೆಯಾಗುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ, ರಾಹುಲ್ ಗಾಂಧಿ ಮತ್ತು ಡಿ.ಕೆ.ಶಿವಕುಮಾರ್ ಆಂತರಿಕ ಸಮೀಕ್ಷೆಯನ್ನ ಮಾಡಿಸಿದ್ದಾರೆಂಬ ಮಾಹಿತಿ ಇದೆ, ಹಿನ್ನಡೆ ಇರುವ ಶಾಸಕರಿಗೆ ತಮ್ಮ ನ್ಯೂನತೆಗಳನ್ನ ಸರಿಪಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ, ಹಾಗೆಯೇ ಎಲ್ಲಾ ಪಕ್ಷದಲ್ಲಿಯು ಹಾಲಿ ಶಾಸಕರಲ್ಲಿ ಕೆಲವು ಶಾಸಕರು ಚುನಾವಣೆಯಲ್ಲಿ ಸೋಲುತ್ತಾರೆ ಹೊಸ ಶಾಸಕರು ಚುನಾಯಿತರಾಗುತ್ತಾರೆ ಎಂದರು.
PublicNext
14/07/2022 10:04 pm