ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸಿಎಂ ಕಾರ್ಯಕ್ರಮಕ್ಕೆ ಆಹ್ವಾನ ನೀಡದಿದ್ದಕ್ಕೆ ಗ್ರಾಮ ಪಂಚಾಯ್ತಿ ಕೆಂಡಾಮಂಡಲ

ಬೆಂಗಳೂರು: ಇಂದು (ಜುಲೈ 14) ಗುರುವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಗ್ರಾಮಪಂಚಾಯ್ತಿ ವ್ಯಾಪ್ತಿಯ ನಾಗನಾಯಕನಹಳ್ಳಿಯಲ್ಲಿ IFFCO ನ್ಯಾನೊ‌ ಯೂರಿಯಾ ಸ್ಥಾವರದ ಅಡಿಗಲ್ಲು‌ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮವನ್ನು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮತ್ತು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೆರವೇರಿಸಲಿದ್ದಾರೆ.

ಆದರೆ ಪ್ರೋಟೊಕಾಲ್ ಪ್ರಕಾರ ಸ್ಥಳೀಯ ಸಂಸ್ಥೆ ಗ್ರಾಮಪಂಚಾಯ್ತಿಯ ಅಧ್ಯಕ್ಷರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುವುದು ವಾಡಿಕೆ. ಈ ವಾಡಿಕೆಯನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಮರೆತಿರುವುದಕ್ಕೆ ಚನ್ನರಾಯಪಟ್ಟಣ ಗ್ರಾಮಪಂಚಾಯ್ತಿ ಸದಸ್ಯರು, ಅಧ್ಯಕ್ಷರು, ಉಪಾಧ್ಯಕ್ಷರು ಖಂಡಿಸಿದ್ದಾರೆ.

ಕಂದಾಯ, ಕನಿಷ್ಠ ಮೂಲಭೂತ ಸೌಲಭ್ಯ, ಯಾವುದೇ ಕಾಮಗಾರಿ, ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ನಿರಪೇಕ್ಷಣಾಪತ್ರ (NOC) ನೀಡುವುದು ಗ್ರಾಮ ಪಂಚಾಯ್ತಿಯೇ. ಸಂವಿಧಾನ ಸಹ ಸ್ಥಳೀಯ ಸಂಸ್ಥೆಗೆ ಹೆಚ್ಚಿನ‌ ಪರಮಾಧಿಕಾರ ನೀಡಿದೆ. ಆದ್ದರಿಂದ ಸರ್ಕಾರ ನಿಯಮ ಉಲ್ಲಂಘನೆ ಮಾಡಿ, ಕಾರ್ಯಕ್ರಮಕ್ಕೆ ಆಹ್ವಾನ ನೀಡದಿರುವುದಕ್ಕೆ ಚನ್ನರಾಯಪಟ್ಟಣ ಗ್ರಾಮಪಂಚಾಯ್ತಿ ಅಧ್ಯಕ್ಷರಾದ ಮಂಜುನಾಥ್ ತಮ್ಮ ಅಸಮಾಧನ ಹೊರಹಾಕಿದ್ದಾರೆ..

ಸರ್ಕಾರ KIADBಗಾಗಿ ಎರಡನೇ ಹಂತದ ಹೆಸರಲ್ಲಿ 1777 ಎಕರೆ ಕೃಷಿ ಜಮೀನಿನ ಸ್ವಾಧೀನಕ್ಕೆ ಮುಂದಾಗಿದೆ. ಇದರ ವಿರುದ್ಧ ಚನ್ನರಾಯಪಟ್ಟಣದಲ್ಲಿ ರೈತರು ಕಳೆದ 101 ದಿನದಿಂದ ಹೋರಾಟ ನಡೆಸುತ್ತಿದ್ದಾರೆ.

ಕಾರ್ಯಕ್ರಮಕ್ಕೆ ಅಹ್ವಾನಿಸಿದರೆ ಎಲ್ಲಿ ಮುಜುಗರವಾಗ್ತದೋ ಎಂಬ ಕಾರಣಕ್ಕೆ ಆಹ್ವಾನ ನೀಡದಿರಬಹುದು ಎಂಬ ಅನುಮಾನವೂ ವ್ಯಕ್ತವಾಗಿದೆ. ಏನೇ ಆಗಲಿ ಸ್ಥಳೀಯ ಸಂಸ್ಥೆಯನ್ನು ಈ ರೀತಿ ನಿರ್ಲಕ್ಷ್ಯ ಮಾಡಬಾರದಿತ್ತು ಎನ್ನಲಾಗ್ತಿದೆ..

-ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ದೇವನಹಳ್ಳಿ..

Edited By : Shivu K
Kshetra Samachara

Kshetra Samachara

14/07/2022 11:31 am

Cinque Terre

2.97 K

Cinque Terre

0

ಸಂಬಂಧಿತ ಸುದ್ದಿ