ಬೆಂಗಳೂರು: ಬಿಬಿಎಂಪಿ ಮಾಲೀಕತ್ವದ ಮಡಿವಾಳ ವಾಣಿಜ್ಯ ಸಂಕೀರ್ಣದಲ್ಲಿರುವ ‘ದವನಂ ಜ್ಯುವೆಲ್ಲರ್ಸ್’ ಹಲವಾರು ವರ್ಷದಿಂದ ಬಾಡಿಗೆ ಪಾವತಿಸಿದೇ 2018-19ರವರೆಗೆ ಬರೋಬ್ಬರಿ 29 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿರುವುದು ಬಿಬಿಎಂಪಿಯ ಲೆಕ್ಕ ಪರಿಶೋಧನಾ ವರದಿಯಲ್ಲಿ ಬೆಳಕಿಗೆ ಬಂದಿದೆ.
ಮಡಿವಾಳ ವಾಣಿಜ್ಯ ಸಂಕೀರ್ಣದಲ್ಲಿ 30 ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಬಾಡಿಗೆ ಪಡೆದಿರುವ ‘ದವನಂ ಜ್ಯುವೆಲ್ಲರ್ಸ್ 2018-19ರ ವೇಳೆಗೆ ಪಾಲಿಕೆಗೆ 29.24 ಕೋಟಿ ರೂ ಬಾಡಿಗೆ ಬಾಕಿ ಉಳಿಸಿಕೊಂಡಿದೆ. 2021-22 ಆರ್ಥಿಕ ವರ್ಷವನ್ನು ಸೇರಿಸಿದರೆ ಈ ಮೊತ್ತ ಸುಮಾರು 50 ಕೋಟಿ ರೂ ಆಗಲಿದೆ ಎಂದು ಅಂದಾಜಿಸಲಾಗಿದೆ.
ಸಹಾಯಕ ಕಂದಾಯ ಅಧಿಕಾರಿಗಳ ಕರ್ತವ್ಯಲೋಪದಿಂದ ಬಾಕಿ ಮೊತ್ತ ವಸೂಲಾಗಿಲ್ಲ. ಬಾಕಿ ವಸೂಲಿಗೆ ಅಧಿಕಾರಿಗಳು ತೆಗೆದುಕೊಂಡಿರುವ ಕ್ರಮಗಳ ಬಗ್ಗೆಯೂ ಲೆಕ್ಕ ಪರಿಶೋಧಕರಿಗೆ ವಿವರ ನೀಡಲಾಗಿಲ್ಲ. ಕೂಡಲೇ ಸಹಾಯಕ ಕಂದಾಯ ಅಧಿಕಾರಿಗಳಿಗೆ ಬಾಕಿ ವಸೂಲಿಗೆ ಕ್ರಮ ಕೈಗೊಳ್ಳುವಂತೆ ಲೆಕ್ಕ ಪರಿಶೋಧನಾ ವರದಿಯಲ್ಲಿ ನಿರ್ದೇಶಿಸಲಾಗಿದೆ ಎನ್ನಲಾಗುತ್ತಿದೆ.
ಪಾಲಿಕೆ ಆಯುಕ್ತರಿಗೆ ದೂರು:
ಕರಾರು ಉಲ್ಲಂಘಿಸಿದ ‘ದವನಂ ಜ್ಯುವೆಲ್ಲರ್ಸ್’ ಗುತ್ತಿಗೆ ರದ್ದು ಪಡಿಸಿ ಕಟ್ಟಡವನ್ನು ಪಾಲಿಕೆ ವಶಕ್ಕೆ ತೆಗೆದುಕೊಳ್ಳಬೇಕು. ಸೂಕ್ತ ಗುತ್ತಿಗೆ ಹಣವನ್ನು ವಸೂಲಿ ಮಾಡುವಲ್ಲಿ ಲೋಪ ಎಸಗಿರುವ ಕಂದಾಯ ಅಧಕಾರಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಈ ಬಗ್ಗೆ ತನಿಖೆಗೆ ಆದೇಶಿಸಬೇಕೆಂದು ಮಾಹಿತಿ ಹಕ್ಕು ಅಧ್ಯಯನ ಕೇಂದ್ರದ ಎಸ್. ಅಮರೇಶ್ ಬಿಬಿಎಂಪಿ ಆಯುಕ್ತರಿಗೆ ದೂರು ನೀಡಿದ್ದಾರೆ.
Kshetra Samachara
11/07/2022 04:57 pm