ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಜಡಿಗೆನಹಳ್ಳಿ ಹೋಬಳಿಯ ಕಟ್ಟಿಗೆನಹಳ್ಳಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಯ್ತು. ಸರ್ಕಾರದ ವಿಶೇಷ ಅನುದಾನದಡಿ 30 ಲಕ್ಷ ರೂ. ವೆಚ್ಚದ ಸಿ.ಸಿ. ರಸ್ತೆ ನಿರ್ಮಾಣದ ಗುದ್ದಲಿ ಪೂಜೆ ನೆರವೇರಿಸಲಾಯ್ತು.
ಕಟ್ಟಿಗೆನಹಳ್ಳಿ ಗ್ರಾಮದ ಕಾಂಗ್ರೆಸ್ ನ ನೂರಾರು ಕಾರ್ಯಕರ್ತರು ಸೇರಿದಂತೆ ಮುಖಂಡರಾದ ರಿಯಾಜ್ ಖಾನ್, ಬಶೀರ್ ಖಾನ್, ಅಲಿಂಖಾನ್, ಅಯೂಬ್ ಖಾನ್, ಅಯಾಜ್ ಖಾನ್ ಅವರು MTB ಸೇವಾ ಕಾರ್ಯ ಮೆಚ್ಚಿ ಬಿಜೆಪಿಗೆ ಸೇರ್ಪಡೆ ಆದರು.
ಈ ವೇಳೆ ಅಭಿಮಾನಿಗಳು ಕುಣಿದು ಕುಪ್ಪಳಿಸಿದರೆ, ಸಚಿವ MTB ನಾಗರಾಜ್ ಸಹ ಅಭಿಮಾನಿಗಳ ಜೊತೆ ಹೆಜ್ಜೆ ಹಾಕಿದರು. MTB ಹಾಕಿದ ನಾಗಿಣಿ ಸ್ಟೆಪ್ಸ್ ಗೆ ಅಭಿಮಾನಿಗಳು ಫಿದಾ ಆದರು.
ಸುರೇಶ್ ಬಾಬು ʼಪಬ್ಲಿಕ್ ನೆಕ್ಸ್ಟ್ʼ ಹೊಸಕೋಟೆ
Kshetra Samachara
05/07/2022 10:16 pm