ವರದಿ- ಬಲರಾಮ್ ವಿ
ಬೆಂಗಳೂರು: ಮಹದೇವಪುರ ವಿಧಾನಸಭಾ ಕ್ಷೇತ್ರದ ಮಂಡೂರುನಲ್ಲಿ ರೈತ ಸೇವಾ ಸಹಕಾರ ಸಂಘ ಬಿದರಹಳ್ಳಿ ರವರ ವತಿಯಿಂದ ಸ್ತ್ರೀ ಶಕ್ತಿ ಸಂಘಗಳಿಗೆ ಸಾಲ ಶಾಸಕ ಅರವಿಂದ ಲಿಂಬಾವಳಿ ವಿತರಿಸಿದರು.
ಈ ಹಿಂದೆ ಕೇಂದ್ರದಲ್ಲಿ ಸಹಕಾರ ಇಲಾಖೆಗೆ ಸಚಿವರೇ ಇರಲಿಲ್ಲ ಆದರೆ ಈಗ ಕೇಂದ್ರ ಗೃಹ ಸಚಿವರು ಆಗಿರುವ ಅಮಿತ್ ಶಾ ಅವರು ಸಹಕಾರಿ ಸಚಿವರಾಗಿ ಜನಪರ ಯೋಜನೆಗಳನ್ನು ಕಾರ್ಯಗತ ಮಾಡುತ್ತಿದ್ದಾರೆ. ಸಹಕಾರ ಸಂಘಗಳು ಅದರಲ್ಲೂ ವಿಶೇಷವಾಗಿ ಮಹಿಳಾ ಸಂಘಗಳು ಇಡೀ ದೇಶದಲ್ಲಿ ಒಂದು ಕ್ರಾಂತಿಯನ್ನೇ ಮಾಡಿ, ಯಶಸ್ಸನ್ನು ಕಾಣುತ್ತಿದೆ.
ತಾವು ಕೂಡಿಟ್ಟಿರುವ ಹಣದಲ್ಲಿ ಆರ್ಥಿಕವಾಗಿ ಸಬಲೀಕರಣ ಮಾಡುತ್ತಿರುವ ತಾಯಂದಿರ ಈ ಸೇವೆ ನಿಜಕ್ಕೂ ಅಭಿನಂದನಾರ್ಹ. ಪರಸ್ಪರ ಸಹಕಾರದಿಂದ ನಾವೆಲ್ಲಾ ಬದುಕಬೇಕು, ಬೆಳೆಯಬೇಕು ಎಂದು ಶಾಸಕರು ತಿಳಿಸಿದರು.
ಈ ಸಂದರ್ಭದಲ್ಲಿ ರೈತ ಸೇವಾ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀ ದೇವರಾಜ ಜ್ಯೋತಿಪುರ, ಉಪಾಧ್ಯಕ್ಷರಾದ ಶ್ರೀ ಚಿನ್ನಪ್ಪ, ಬೆಂಗಳೂರು ಪೂರ್ವ ತಾಲ್ಲೂಕು ಮುಖ್ಯಕಾರ್ಯನಿರ್ವಾಹಣಾಧಿಕಾರಿ ಶ್ರೀ ಮಂಜುನಾಥ್, ರೈತ ಸೇವಾ ಸಹಕಾರ ಸಂಘದ ನಿರ್ದೇಶಕರಾದ ಶ್ರೀ ಸೋಮಶೇಖರ್ ಗೌಡ, ಶ್ರೀ ನಾರಾಯಣ ಸ್ವಾಮಿ, ಶ್ರೀ ನರೇಂದ್ರ ಬಾಬು, ಶ್ರೀ ರಾಮಚಂದ್ರಪ್ಪ, ಶ್ರೀ ವೆಂಕಟಸುಬ್ಬರಾವ್ ಸೇರಿದಂತೆ ಅಧಿಕಾರಿಗಳು, ಫಲಾನುಭವಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
PublicNext
04/07/2022 10:00 pm