ಬೆಂಗಳೂರು: ಜಾತ್ಯತೀತ ಜನತಾ ದಳದ ಕೇಂದ್ರ ಜೆ.ಪಿ.ಭವನದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ, ಶಾಸಕ ಗೌರಿ ಶಂಕರ್,ಮಂಜಣ್ಣ ಬೆಂಗಳೂರುನಗರ ಜೆ.ಡಿ.ಎಸ್.ಅಧ್ಯಕ್ಷ ಪ್ರಕಾಶ್ ತುಮಕೂರು ಹಿರಿಯ ರಾಜಕಾರಣಿಗಳ ಸಮ್ಮುಖದಲ್ಲಿ ಅಟಿಕಾ ಗೋಲ್ಡ್ ಮಾಲೀಕ,ಸಮಾಜ ಸೇವಕ ಬೊಮ್ಮನಹಳ್ಳಿ ಬಾಬು ಜೆ.ಡಿ.ಎಸ್.ಪಕ್ಷಕ್ಕೆ ಸೇರ್ಪಡೆಯಾದರು.
28ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿಯೊಬ್ಬ ನಾಗರಿಕರ ಮನೆ ಭೇಟಿ ಮಾಡಲು ಜನತಾ ಮಿತ್ರ ಅಂದೋಲನ ನಾಳೆಯಿಂದ ಪ್ರಾರಂಭವಾಗಲಿದೆ.
ಇದೇ ಸಂದರ್ಭದಲ್ಲಿ ಅಟಿಕಾ ಗೋಲ್ಡ್ ಮಾಲೀಕ ಬೊಮ್ಮನಹಳ್ಳಿ ಬಾಬು ಮಾತನಾಡಿ ನಾಡಿನ ನೆಲ,ಜಲ ಭಾಷೆ ನಾಡು,ನುಡಿಗೆ ಹಿತ ಕಾಯುವ ಮತ್ತು ರಕ್ಷಣೆಗೆ ,ಸಾಮಾಜಿಕ ಸಮಾನತೆ ಮತ್ತು ಜಾತ್ಯತೀತ ಸಿದ್ದಾಂತವನ್ನು ಸಂಪೂರ್ಣ ಸುರಕ್ಷತೆ, ರಕ್ಷಣೆ ಮಾಡುತ್ತಿರುವ ಜಾತ್ಯತೀತ ಜನತಾ ದಳ ಪಕ್ಷ ಅಬಾರಿಯಾಗಿರುತ್ತೇನೆ.
ಇನ್ನು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಜೀರವರ ಆಶೀರ್ವಾದದೊಂದಿಗೆ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿರವರ ಕೈಬಲಪಡಿಸಲು ನಾನು ಜೆ.ಡಿ.ಎಸ್.ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇನೆ ಎಂದರು.
Kshetra Samachara
30/06/2022 08:41 pm