ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಲಹಂಕ: ಟೈಲರ್ ಕನ್ನಯ್ಯ‌ ಲಾಲ್ ಹತ್ಯೆಗೆ ಖಂಡನೆ: ಬಜರಂಗದಳ ಕಾರ್ಯಕರ್ತರ ಪ್ರತಿಭಟನೆ

ಯಲಹಂಕ: ಉದಯ್ ಪುರದ ಟೈಲರ್ ಕನ್ನಯ್ಯಲಾಲ್ ಶಿರಚ್ಛೇದನ ಖಂಡಿಸಿ ಇಂದು ಯಲಹಂಕದ ಕೆಂಪೇಗೌಡ ವೃತ್ತದಲ್ಲಿ ಬಜರಂಗದಳದ ಕಾರ್ಯಕರ್ತರು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.

ಈ ವೇಳೆ ಕೊಲೆ ಆರೋಪಿಗಳನ್ನು‌ ಕೂಡಲೇ ಗಲ್ಲಿಗೇರಿಸಿ ಎಂದು ಪ್ರತಿಭಟನಾಕಾರರು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು. ಯಾವುದೇ ಅಹಿತಕರ ಘಟನೆ ಆಗದಿರಲೆಂದು ಯಲಹಂಕ ಪೊಲೀಸರು ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ರು. ಇನ್ನು ಇದೇ ವೇಳೆ ಮಾತನಾಡಿದ ಬಜರಂಗದಳ ಮುಖಂಡ ಮಂಜು ವ್ಯಕ್ತಿಯ ಸ್ವಾತಂತ್ರ್ಯದ ಹರಣ ನಡೆಯುತ್ತಿದೆ. ಇದು ಸರಿಯಲ್ಲ ಎಂದರು..

ಸುರೇಶ್ ಬಾಬು, ಪಬ್ಲಿಕ್ ನೆಕ್ಸ್ಟ್, ಯಲಹಂಕ

Edited By : Manjunath H D
Kshetra Samachara

Kshetra Samachara

30/06/2022 07:27 pm

Cinque Terre

3.78 K

Cinque Terre

1

ಸಂಬಂಧಿತ ಸುದ್ದಿ