ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಹೇರೋಹಳ್ಳಿ ವಾರ್ಡ್ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ

ಬೆಂಗಳೂರು: ಯಶವಂತಪುರ ವಿಧಾನಸಭೆ ಕ್ಷೇತ್ರದ ಹೇರೋಹಳ್ಳಿ ವಾರ್ಡ್ ನಲ್ಲಿ ಬಿಲೇಕಲ್ಲು, ವಿಘ್ನೇಶ್ವರ ನಗರ, ದನಿನಮಂದಿ ಬಡಾವಣೆ ನಿವಾಸಿಗಳಿಗೆ ಸರ್ಕಾರದಿಂದ ಅಲರ್ಟ್ ಆಗಿದ್ದ ಫ್ರೀ ಸೈಟ್ ಹಕ್ಕುಪತ್ರವನ್ನು ಇಂದು ವಿತರಿಸಲಾಯಿತು.

ಈ ಜನರೆಲ್ಲ ಸುಮಾರು ವರ್ಷಗಳಿಂದ ಅವರ ಜಾಗದ ಹಕ್ಕುಪತ್ರವಿಲ್ಲದೆ ಮನೆ ಕಟ್ಟಿಕೊಂಡು ವಾಸ ಮಾಡ್ತಿದ್ರು. ಈ ಹಿನ್ನೆಲೆಯಲ್ಲಿ ಇವತ್ತು ಹೇರೋಹಳ್ಳಿ ಶಾಸಕರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡವರಿಗೆ ಸಹಕಾರ ಸಚಿವರ ನೇತೃತ್ವದಲ್ಲಿ ಎ ಖಾತಾ ಪತ್ರವನ್ನು ಬಿಡುಗಡೆಗೊಳಿಸಲಾಯಿತು. ಹೀಗೆ ಹಕ್ಕುಪತ್ರ ಪಡಕೊಂಡ ಸ್ಥಳೀಯರು ಕೊನೆಗೂ ನಿಟ್ಟುಸಿರು ಬಿಡುವಂತಾಯಿತು.

ವರದಿ: ರಂಜಿತಾ ಸುನಿಲ್ ʼಪಬ್ಲಿಕ್‌ ನೆಕ್ಟ್ಸ್‌ʼ ಬೆಂಗಳೂರು

Edited By : Nagesh Gaonkar
PublicNext

PublicNext

29/06/2022 07:55 pm

Cinque Terre

46.03 K

Cinque Terre

0

ಸಂಬಂಧಿತ ಸುದ್ದಿ