ಆನೇಕಲ್: ಪುರಸಭೆ ಮೂರು ವಾರ್ಡ್ ಗಳಿಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ 2 ಸ್ಥಾನ, ಕಾಂಗ್ರೆಸ್ 1 ಸ್ಥಾನ ಗೆಲುವು ಸಾಧಿಸಿದೆ ವಾರ್ಡ್ ನಂಬರ್ 16ರಲ್ಲಿ ಪಕ್ಷೇತರ ಅಭ್ಯರ್ಥಿ ಶ್ರೀಧರ್ ಬಾಬು ಎರಡು ಮತಗಳ ಅಂತರದಲ್ಲಿ ಸೋಲು ಕಂಡಿದ್ದಾರೆ.
ಆನೇಕಲ್ ಪುರಸಭೆ ವ್ಯಾಪ್ತಿಯ ವಾರ್ಡ್ ನಂ 14 ಮತ್ತು 16 ಹಾಗೂ 17 ನೇ ವಾರ್ಡ್ ಗಳಿಗೆ ಜೂನ್ 19 ರಂದು ಉಪ ಚುನಾವಣೆ ನಡೆದಿದ್ದು ಇಂದು ಅದರ ಪಲಿತಾಂಶ ಹೊರ ಬಂದಿದ್ದು ಅದರಲ್ಲಿ ವಾರ್ಡ್ ನಂ 14 ರ ಬಿಜೆಪಿ ಪಕ್ಷದ ಅಭ್ಯರ್ಥಿ ಸಿ.ಆರ್, ಶಾಮಲ ಬಿ.ನಾಗರಾಜ್ ಮತ್ತು ವಾರ್ಡ್ ನಂ 16 ರ ಬಿಜೆಪಿ ಪಕ್ಷದ ಅಭ್ಯರ್ಥಿಯಾದ ಶೋಬಾರಾಣಿ ಗೆಲುವು ಸಾದಿದ್ದಾರೆ ಹಾಗೆಯೇ ವಾರ್ಡ್ ನಂ 17 ರಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಪ್ರಸಾದ್ ರವರು ಗೆಲುವು ಸಾದಿಸಿದ್ದಾರೆ.
ಈ ಉಪಚುನಾವಣೆಯು ಕಾಂಗ್ರೆಸ್ ಮತ್ತು ಬಿಜೆಪಿಗೆ ಪ್ರತಿಷ್ಠತೆಯ ಕಣವಾಗಿದ್ದು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ನಡುವೆ ನಡೆದ ಹಣಾಹಣಿಯಲ್ಲಿ ಬಿಜೆಪಿ ಪಕ್ಷ 2 ಸ್ಥಾನ ಗೆಲುವು ಸಾದಿಸಿದ್ದು, ಕಾಂಗ್ರೆಸ್ ಪಕ್ಷ 1 ಸ್ಥಾನವನ್ನು ಗಳಿಸಿದ್ದು, ತಮ್ಮ-ತಮ್ಮ ಪಕ್ಷಗಳ ಅಭ್ಯರ್ಥಿಗಳ ಪಲಿತಾಂಶ ಹೊರ ಬರುತ್ತಿದ್ದಂತೆ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಹರ್ಷ ವ್ಯಕ್ತ ಪಡಿಸಿದರು.
Kshetra Samachara
21/06/2022 07:22 pm