ಯಲಹಂಕ: ಎರಡು ದಿನಗಳ ರಾಜ್ಯ ಪ್ರವಾಸಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದಾರೆ. ಯಲಹಂಕ ಏರ್‌ಫೋರ್ಸ್ ಸ್ಟೇಷನ್‌ಗೆ ದೆಹಲಿಯಿಂದ ಆಗಮಿಸುವ ಪ್ರಧಾನಿ ಮೋದಿ ಅವರನ್ನು ಬರಮಾಡಿಕೊಳ್ಳಲು ಸಿಎಂ ಬಸವರಾಜ ಬೊಮ್ಮಾಯಿ ಆಗಮಿಸುವರು. ಪ್ರಧಾನಿಗಳ ಸ್ವಾಗತಕ್ಕೆ ಏರ್‌ಫೋರ್ಸ್ ಸ್ಟೇಷನ್ ಬಳಿ ಭಾರಿ ಭದ್ರತೆಯನ್ನು ನಗರ ಪೊಲೀಸರು ಕಲ್ಪಿಸಿದ್ದಾರೆ.
ಹೆಚ್ಚುವರಿ ಪೊಲೀಸ್ ಆಯುಕ್ತ ರಮಣ್ ಗುಪ್ತ, ನಗರ ಸಂಚಾರಿ ಪೊಲೀಸ್ ಆಯುಕ್ತ ರವಿಕಾಂತೇಗೌರ ಸಮ್ಮುಖದಲ್ಲಿ ಏರ್‌ಫೋರ್ಸ್ ಪ್ರವೇಶ ದ್ವಾರದ ಬಳಿ ಭದ್ರತಾ ತಪಾಸಣೆ ನಡೆಸಲಾಗುತ್ತಿದೆ. ಪ್ರವೇಶದ್ವಾರದ ಎದುರಿಗೆ BBMPಯಿಂದ ಪ್ರಧಾನಿಗಳ ಸ್ವಾಗತ ಕೋರುವ ಬೃಹತ್ ವೆಲ್ಕಮ್‌ಬೋರ್ಡ್ ಹಾಕಲಾಗಿದೆ. ಭದ್ರತೆ ಸೇರಿದಂತೆ ಎಲ್ಲಾ ವಿಷಯ ಕುರಿತು ನಮ್ಮ ಹಿರಿಯ ಪ್ರತಿನಿಧಿ ಸುರೇಶ್ ಬಾಬು ನಡೆಸಿರುವ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ..
PublicNext
20/06/2022 11:46 am