ಬೆಂಗಳೂರು ದಕ್ಷಿಣ : ತಾತ್ಕಾಲಿಕ ಮೀಟರ್ ಗಳನ್ನು ಅಳವಡಿಕೆ ಮಾಡಿ ದುಪ್ಪಟ ಹಣ ವಸೂಲಿ ಮಾಡಿಲಾಗಿದೆ ಎಂದು ಅರೋಪದ ಹಿನ್ನೆಲೆಯಲ್ಲಿ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ನಡೆಸಿರುವ ಘಟನೆ ಹುಳಿಮಾವು ಬೆಸ್ಕಾಂ ಕಛೇರಿ ಮುಂಭಾಗ ನಡೆದಿದೆ.
ಇನ್ನು ಬೆಟ್ಟದಾಸನಪುರ, ಮೈಲಸಂದ್ರ ಸುತ್ತಮುತ್ತಲಿನ ವಾಸಿಗಳು ಬೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಕಳೆದ ಹತ್ತು ವರ್ಷಗಳಿಂದ ತಾತ್ಕಾಲಿಕ ಮೀಟರ್ ಅಳವಡಿಕೆ ಮಾಡಿದ್ದು ಆ ತಾತ್ಕಾಲಿಕ ಮೀಟರ್ ಗಳಿಂದ ದುಪ್ಪಟ್ಟು ಬಿಲ್ ಬರುತ್ತಿದೆ. ಹೀಗಾಗಿ ನಿವಾಸಿಗಳು ಕಂಗಾಲಾಗಿದ್ದಾರೆ.
ಸದ್ಯ ದುಪ್ಪಟ್ಟು ಬಿಲ್ ಕಟ್ಟಲಾಗದೆ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ ಅಲ್ಲದೇ ವಿಜಿಲೆನ್ಸ್ ನೆಪದಲ್ಲಿ ಪದೇ ಪದೇ ನಿವಾಸಿಗಳಿಗೆ ಬೆಸ್ಕಾಂ ಸಿಬ್ಬಂದಿ ಕಿರುಕುಳ ನೀಡುತ್ತಿದಾರೆ. ಅದು ಮಾತ್ರವಲ್ಲದೆ ಪರ್ಮನೆಂಟ್ ಮೀಟರ್ ಅಳವಡಿಕೆ ಮಾಡಲು ಲಕ್ಷ ಲಕ್ಷ ಹಣಕ್ಕೆ ಬೇಡಿಕೆ ಆರೋಪ. ಕೇಳಿಬಂದಿದೆ. ಈ ಎಲ್ಲಾ ಸಮಸ್ಯೆಗಳಿಂದಾಗಿ ಬೇಸತ್ತಿದ್ದ ಗ್ರಾಮಸ್ಥರು ಬೆಸ್ಕಾಂ ಅಧಿಕಾರಿಗಳ ವಿರುದ್ಧ ಬೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
Kshetra Samachara
18/06/2022 09:25 pm