ಯಲಹಂಕ: ಬಿಜೆಪಿ ರಾಷ್ಟ್ರೀಯ OBC ಪ್ರಶಿಕ್ಷಣ ಶಿಬಿರ ಕಳೆದ ಮೂರು ದಿನಗಳಿಂದ ಯಲಹಂಕದ ರಾಜಾನುಕುಂಟೆ ಬಳಿ ನಡೆಯುತ್ತಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ OBC ಮೋರ್ಚಾಗೆ ಸೇರಿದ 118 ಜನ ಶಿಬಿರಾರ್ಥಿಗಳು ಭಾಗಿಯಾಗಿದ್ದಾರೆ. ದೇಶಾದ್ಯಂತ OBC ಸಮುದಾಯಗಳನ್ನು ಹೇಗೆ ಸಧೃಡಗೊಳಿಸಬೇಕು, ಹೇಗೆ ಅಭಿವೃದ್ಧಿ ಕೆಲಸಗಳಾಗಿ ಅನುಷ್ಠಾನ ಮಾಡಬೇಕು ಎಂಬೆಲ್ಲಾ ವಿಚಾರಗಳ ಚಿಂಥನ- ಮಂಥನ ಕಾರ್ಯಕ್ರಮ ನಡೆಯುತ್ತಿದೆ.
ದೇವನಹಳ್ಳಿ ಏರ್ಪೋರ್ಟ್ ಗೆ ಆಗಮಿಸಿದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾರನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು ಸ್ವಾಗತಿಸಿ ನೇರವಾಗಿ OBC ಮೋರ್ಚಾ ಕರೆದುಕೊಂಡು ಬಂದರು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಡ್ಡಾರವರಿಗೆ ರಾಜ್ಯ ಒಬಿಸಿ ಮೊರ್ಚಾ ವತಿಯಿಂದ ಗದೆ ನೀಡಿ ಗೌರವಿಸಲಾಯ್ತು.
ಇದೇ ವೇಳೆ ಯಲಹಂಕ ಶಾಸಕ ವಿಶ್ವನಾಥ್ ಮಾತನಾಡಿ, ರಾಷ್ಟ್ರೀಯ ಓಬಿಸಿ ಮೋರ್ಚಾ ಕಾರ್ಯಕ್ರಮ ಲಕ್ಷ್ಮಣ ಜಿ ನೇತೃತ್ವದಲ್ಲಿ ನಡೆಯುತ್ತಿದೆ. ದೇಶದಲ್ಲಿ 50% ಓಬಿಸಿ ಜನಾಂಗಕ್ಕೆ ಏನೆಲ್ಲಾ ಯೋಜನೆ ನೀಡಲಾಗ್ತಿದೆ ಎನ್ನುವುದನ್ನು ತಿಳಿಸಲಾಗ್ತಿದೆ.
ಈಗ ನಡ್ಡಾ, ಸಿಎಂ ಬೊಮ್ಮಾಯಿ ಭಾಗಿಯಾಗಿದ್ದಾರೆ. ವರ್ಲ್ಡ್ ಟ್ರೇಡ್ ಆರ್ಗನೈಸೇಶನ್ ಸಮಸ್ಯೆ ಏನಿತ್ತು, ಅದರ ಸಮಸ್ಯೆಯನ್ನು ಬಗೆ ಹರಿಸಲಾಗಿದೆ ಎಂದು ತಿಳಿಸಿದರು.
SureshBabu Public Next ಯಲಹಂಕ..
PublicNext
18/06/2022 03:21 pm